ನೀವು ಎಲ್ಲೇ ಚಿನ್ನ, ಬೆಳ್ಳಿ ಖರೀದಿ ಮಾಡಿದರೂ ಪರ್ಸ್ ಅಥವಾ ಕ್ಯಾರಿ ಬ್ಯಾಗ್ ಜೊತೆಗೆ ಆ ಆಭರಣವನ್ನು ಗುಲಾಬಿ ಬಣ್ಣದ ಪೇಪರ್‌ನಲ್ಲಿ ಸುತ್ತಿ ಕೊಡುತ್ತಾರೆ. ಅಷ್ಟಕ್ಕೂ ಆಭರಣಗಳನ್ನು ಗುಲಾಬಿ ಬಣ್ಣದ ಕಾಗದದಲ್ಲಿಯೇ ಸುತ್ತಿ ಕೊಡುವುದೇಕೆ ಎಂಬುದು ನಿಮಗೆ ತಿಳಿದಿದೆಯೇ?
ಚಿನ್ನ ಅಥವಾ ಬೆಳ್ಳಿಯ ಆಭರಣಗಳನ್ನು ಖರೀದಿಸುವಾಗ ಅದನ್ನು ಗುಲಾಬಿ ಬಣ್ಣದ ಪೇಪರ್‌ನಲ್ಲಿ ಸುತ್ತಿ ಒಂದು ಪೆಟ್ಟಿಗೆಯಲ್ಲಿ ಹಾಕಿಕೊಡುತ್ತಾರೆ. ಏಕೆ ಕೇವಲ ಗುಲಾಬಿ ಬಣ್ಣದ ಪೇಪರ್ ಮಾತ್ರ ಬಳಸಲಾಗುತ್ತದೆ? ಕೆಂಪು, ನೀಲಿ ಇತ್ಯಾದಿ ಬಣ್ಣದ ಪೇಪರ್ ಏಕೆ ಬಳಸುವುದಿಲ್ಲ ಎಂಬ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ.
ವರದಿಗಳ ಪ್ರಕಾರ, ಚಿನ್ನ ಮತ್ತು ಬೆಳ್ಳಿಯನ್ನು ಗುಲಾಬಿ ಬಣ್ಣದ ಕಾಗದದಲ್ಲಿ ಸುತ್ತುವುದಕ್ಕೆ ಎಂಬುದಕ್ಕೆ ಯಾವುದೇ ನಿರ್ದಿಷ್ಟ ಕಾರಣವಿಲ್ಲ. ಬದಲಿಗೆ ಇದು ಶತಮಾನಗಳಿಂದಲೂ ನಡೆದುಕೊಂಡು ಬಂದಂತಹ ಸಂಪ್ರದಾಯವಾಗಿದೆ. ಹಿಂದಿನಿಂದಲೂ ಆಭರಣ ಆಂಗಡಿಯವರು ಗುಲಾಬಿ ಬಣ್ಣದ ಕಾಗದದಲ್ಲಿಯೇ ಆಭರಣಗಳನ್ನು ಸುತ್ತಿಕೊಡುತ್ತಿದ್ದರು.
ಏಕೆಂದರೆ ನಮ್ಮ ಸಂಪ್ರದಾಯದಲ್ಲಿ ಕೆಂಪು ಮತ್ತು ಗುಲಾಬಿ ಬಣ್ಣಗಳನ್ನು ಶುಭವೆಂದು ಪರಿಗಣಿಸಲಾಗಿದೆ. ಇದು ಶುಭ ಮತ್ತು ಇದು ಆಭರಣಗಳನ್ನು ಗೀರುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂಬ ಕಾರಣಕ್ಕೆ ಈ ಬಣ್ಣದ ಕಾಗದದಲ್ಲಿಯೇ ಆಭರಣಗಳನ್ನು ಇಡಲಾಗುತ್ತದೆ.