Saturday, August 30, 2025

CINE | ಯಶ್‌ ಬಂದ್ರೆ ಇಡೀ ಸೆಟ್‌ ಸೈಲೆಂಟ್‌ ಆಗೋಗತ್ತೆ! ರಾಕಿ ಭಾಯ್‌ ಬಗ್ಗೆ ಏನ್‌ ಹೇಳಿದ್ರು ಅಕ್ಷಯ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ಯಶ್‌ ಸದ್ಯ ಬಾಲಿವುಡ್‌ನಲ್ಲಿ ಬ್ಯುಸಿ ಇದ್ದಾರೆ. ಕೆಜಿಎಫ್‌ ಅನ್ನೋ ಒಂದು ಸಿನಿಮಾ ಯಶ್‌ ರೇಂಜ್‌ನ್ನು ಬದಲಾಯಿಸಿದೆ. ಇದೀಗ ಯಶ್‌ ಬರೀ ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಮಾತ್ರ ಮಾಡ್ತಿದ್ದಾರೆ ಎನ್ನಲಾಗಿದೆ.

ಯಶ್‌ ನಟನೆಯ ರಾಮಾಯಣ ಹಾಗೂ ಟಾಕ್ಸಿಕ್‌ ರಿಲೀಸ್‌ ಆಗಬೇಕಿದೆ. ಯಶ್‌ ಬಗ್ಗೆ ಬಾಲಿವುಡ್‌ ನಟ ಅಕ್ಷಯ್‌ ಒಬೆರಾಯ್  ಮಾತನಾಡಿದ್ದಾರೆ. ಯಶ್‌ ಶೂಟಿಂಗ್‌ಗೆ ಬಂದ್ರೆ ಇಡೀ ಸೆಟ್‌ ಸೈಲೆಂಟ್‌ ಆಗಿ ಬಿಡುತ್ತದೆ ಎಂದು ಹೇಳಿದ್ದಾರೆ.

ಟಾಕ್ಸಿಕ್‌ ಸಿನಿಮಾದಲ್ಲಿ ಅಕ್ಷಯ್‌ ಒಬೆರಾಯ್‌ ಕೆಲಸ ಮಾಡುತ್ತಿದ್ದು, ಈ ಸಿನಿಮಾಗಾಗಿ ಕನ್ನಡ ಕೂಡ ಕಲಿಯುತ್ತಿದ್ದಾರಂತೆ.ಯಶ್ ಸಖತ್ ಹ್ಯಾಂಡ್ಸಮ್ ಆಗಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಇಡೀ ಸೆಟ್ ಅವರು ಬಂದಾಗ ಸೈಲೆಂಟ್ ಆಗುತ್ತದೆ ಎಂಬುದನ್ನು ಕೂಡ ವಿವರಿಸಿದ್ದಾರೆ. ‘ಅಂದು ಯಶ್ ಜನ್ಮದಿನ. ಅವರು ಟಾಕ್ಸಿಕ್ ಸಿನಿಮಾ ಸೆಟ್​ನಿಂದ ಹೊರಕ್ಕೆ ಬರುತ್ತಿದ್ದರು. ಸೂಟ್ ಧರಿಸಿದ್ದು, ಬಿಳಿ ಬಣ್ಣ ಟೋಪಿ ಹಾಕಿದ್ದರು. ನಾನು ಅವರನ್ನು ಮೊದಲ ಬಾರಿಗೆ ನೋಡಿದ್ದು ಆಗಲೇ. ಅವರು ನಿಜಕ್ಕೂ ಗುಡ್ ಲುಕಿಂಗ್ ವ್ಯಕ್ತಿ’ ಎಂದಿದ್ದಾರೆ ಅಕ್ಷಯ್.

ಇದನ್ನೂ ಓದಿ