ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಕಾಸ ಏರ್ ಅಕ್ಟೋಬರ್ 1, 2025 ರಿಂದ ಬೆಂಗಳೂರಿನಿಂದ ಥೈಲ್ಯಾಂಡ್‌ನ ಫುಕೆಟ್ ಗೆ ನೇರ ವಿಮಾನ ಹಾರಾಟ ನಡೆಸಲಿದೆ.
ಬೆಂಗಳೂರಿನಿಂದ ಪ್ರತಿದಿನ ಬೆಳಿಗ್ಗೆ 6:25 ಕ್ಕೆ ಹೊರಟು ಮಧ್ಯಾಹ್ನ 12:40 ಕ್ಕೆ ಫುಕೆಟ್ ತಲುಪಲಿದೆ. ಫುಕೆಟ್ ನಿಂದ ದೈನಂದಿನ ವಿಮಾನಗಳು ಮಧ್ಯಾಹ್ನ 1:40 ಕ್ಕೆ ಹೊರಟು ಸಂಜೆ 4:40 ಕ್ಕೆ ಬೆಂಗಳೂರು ತಲುಪಲಿವೆ.
ಆಕಾಸ ಏರ್‌ನ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿರುವ ಗ್ರಾಹಕರು ಪ್ರೋಮೋ ಕೋಡ್ FLYMORE ಬಳಸಿ ತಮ್ಮ ಬುಕಿಂಗ್‌ಗಳಲ್ಲಿ 20% ವರೆಗೆ ರಿಯಾಯಿತಿಯನ್ನು ಪಡೆಯ ಬಹುದು.