Sunday, August 31, 2025

ಕರ್ನಾಟಕದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಎಂ.ಎ. ಸಲೀಂ ನೇಮಿಸಿ ಸರಕಾರ ಅಧಿಕೃತ ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಹಂಗಾಮಿ ಡಿಜಿ ಮತ್ತು ಐಜಿಪಿಯಾಗಿ ನೇಮಕವಾಗಿದ್ದ ಡಾ.ಎಂ.ಎ ಸಲೀಂ ಅವರನ್ನು ರಾಜ್ಯ ಸರಕಾರ ನೂತನ ಡಿಜಿ ಮತ್ತು ಐಜಿಪಿಯಾಗಿ ಖಾಯಂಗೊಳಿಸಿ ಅಧಿಕೃತ ಆದೇಶ ಹೊರಡಿಸಿದೆ.

ಈ ಕುರಿತಂತೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಡಾ. ಎಂ. ಎ. ಸಲೀಂ, ಐಪಿಎಸ್ (ಕೆಎನ್: 1993), ಪೊಲೀಸ್ ಮಹಾನಿರ್ದೇಶಕರು, ಅಪರಾಧ ತನಿಖಾ ಇಲಾಖೆ, ವಿಶೇಷ ಘಟಕಗಳು ಮತ್ತು ಆರ್ಥಿಕ ಅಪರಾಧಗಳು, ಬೆಂಗಳೂರು, ಕರ್ನಾಟಕ, ಬೆಂಗಳೂರು ಇವರನ್ನು ಕರ್ನಾಟಕ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರ್ದೇಶಕರು (ಪೊಲೀಸ್ ಪಡೆಯ ಮುಖ್ಯಸ್ಥರು) ಹುದ್ದೆಗೆ ನೇಮಕ ಮಾಡಲಾಗಿದೆ.

ಇದನ್ನೂ ಓದಿ