ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೂಮಿಯಲ್ಲಿ ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳ ಸಹಿತ ಎಲ್ಲರಿಗೂ ಬದುಕುವ ಹಕ್ಕಿದೆ. ವಿದಾನ ಸೌಧದ ಬಳಿ ಹಲವು ವರ್ಷಗಳಿಂದ ಬೀಡು ಬಿಟ್ಟಿರುವ ಶ್ವಾನಗಳ ಬಗ್ಗೆ ಪರ-ವಿರೋಧ ಅಭಿಪ್ರಾಯ ಇದೆ ಎಂದು ಮೂಖ ಪ್ರಾಣಿಗಳನ್ನ ಬೇರೆ ಕಡೆ ಬಿಡಲು ಆಗುವುದಿಲ್ಲ.ಸುಪ್ರೀಂ ಕೋರ್ಟ್ ನ ಸೂಚನೆ ಮೇರೆಗೆ ಎರಡು ತಿಂಗಳ ಹಿಂದೆ ಉನ್ನತ ಮಟ್ಟದ ಸಮಿತಿ ರಚಿಸಿ ಶ್ವಾನಗಳಿಗೂ ಬದುಕುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ವಿದಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಹೇಳಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಶ್ವಾನಗಳು ವಿಶಾಲ ಜಾಗದಲ್ಲಿ ತಿರುಗಾಡಲು, ಮಳೆ-ಬಿಸಿಲಿಗೆ ರಕ್ಷಣೆ ನೀಡುವ ಜೊತೆ ವೈದ್ಯಕೀಯ ಚಿಕಿತ್ಸೆ,ಊಟೋಪಚಾರದ ಜವಾಬ್ದಾರಿಯನ್ನು ಎನ್‌ಜಿಓಗೆ ನೀಡುವ ಮೂಲಕ ಪ್ರಾಣಿಗಳಿಗೂ ಸ್ವಾಭಿಮಾನದ ಬದುಕು ಕಲ್ಪಿಸಲಾಗಿದೆ. ಗ್ರಾಮ ಪಂಚಾಯತ್,ನಗರಸಭೆಗಳಿಗೂ 15ನೇ ಹಣಕಾಸಿನಲ್ಲಿ ಪ್ರಾಣಿಗಳ ರಕ್ಷಣೆಗೆ ಅನುದಾನ ಒದಗಿಸುವ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸುವುದಾಗಿ ಹೇಳಿದರು.
ಎಲ್ಲೂ ಇಲ್ಲದ ಅತ್ಯಾಧುನಿಕ ವ್ಯವಸ್ಥೆಗಳು ಮಂಗಳೂರಿನಲ್ಲಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಇಲ್ಲಿದೆ.ಆ ನಿಟ್ಟಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರವೂ ಒಪ್ಪಿಗೆ ಸೂಚಿಸಿದೆ. ಇಲ್ಲಿಗೆ ಏನೇನು ಬೇಕೆನ್ನುವ ಬಗ್ಗೆ ಸಚಿವ ಸಂಪುಟ ಸಭೆಗೆ ಮೊದಲೇ ಪಟ್ಟಿ ತಯಾರಿಸಬೇಕಿದೆ. ಶಿಕ್ಷಣ,ಆರೋಗ್ಯ,ಸಮುದ್ರ,ಗುಡ್ಡ-ಬೆಟ್ಟ, ಧಾರ್ಮಿಕ ಪ್ರವಾಸೋದ್ಯಮದ ಅಭಿವೃದ್ಧಿಯ ಬಗ್ಗೆ ಈಗಲೇ ಸಿದ್ಧತೆ ನಡೆಸಬೇಕಿದ್ದು ಅಧಿಕಾರಿಗಳ ಜೊತೆ ಚರ್ಚಿಸಿ ಯೋಜನೆ ರೂಪಿಸಬೇಕಿದೆ ಎಂದರು.