Monday, September 1, 2025

Terrifying Tribe | ಜಗತ್ತಿನ ಅತ್ಯಂತ ಭಯಾನಕ ಬುಡಕಟ್ಟು ಜನಾಂಗ ಯಾವುದು ಗೊತ್ತಾ? ಇವರ ಹತ್ರ ಹೋಗೋದಕ್ಕೂ ಜನ ಭಯ ಬೀಳ್ತಾರೆ!

ಜಗತ್ತಿನಲ್ಲಿ ಅನೇಕ ಬುಡಕಟ್ಟು ಜನಾಂಗಗಳು ತಮ್ಮದೇ ಆದ ಸಂಸ್ಕೃತಿ, ಬದುಕು ಮತ್ತು ನಂಬಿಕೆಗಳನ್ನು ಹೊಂದಿವೆ. ಆದರೆ, ಇವುಗಳಲ್ಲಿ ಕೆಲವನ್ನು ಅತ್ಯಂತ ಭಯಾನಕ ಹಾಗೂ ರಹಸ್ಯಮಯ ಎಂದು ಪರಿಗಣಿಸಲಾಗುತ್ತದೆ. ಅಂತಹ ಜನಾಂಗಗಳಲ್ಲಿ ಭಾರತದಲ್ಲಿರುವ ಅಂಡಮಾನ್ ದ್ವೀಪ ಸಮೂಹದ ಸೆಂಟಿನೆಲೀಸ್ ಬುಡಕಟ್ಟು ಜನಾಂಗವನ್ನು ಜಗತ್ತಿನ ಅತ್ಯಂತ ಭಯಾನಕ ಬುಡಕಟ್ಟು ಎಂದು ಕರೆಯಲಾಗುತ್ತದೆ.

ಸೆಂಟಿನೆಲೀಸ್ ಜನಾಂಗವು ಉತ್ತರ ಸೆಂಟಿನೆಲ್ ದ್ವೀಪದಲ್ಲಿ ವಾಸವಾಗಿದ್ದು, ಇಂದಿಗೂ ಹೊರಗಿನ ಜಗತ್ತಿನ ಸಂಪರ್ಕದಿಂದ ಸಂಪೂರ್ಣವಾಗಿ ದೂರ ಉಳಿದಿದೆ. ಹೊರಗಿನವರು ದ್ವೀಪದತ್ತ ಹೋದರೆ, ಅವರು ಬಿಲ್ಲು ಬಾಣಗಳಿಂದ ದಾಳಿ ಮಾಡುವ ಘಟನೆಗಳು ಹಲವು ಬಾರಿ ನಡೆದಿದೆ. 2006ರಲ್ಲಿ ಇಬ್ಬರು ಮೀನುಗಾರರು ಆ ದ್ವೀಪದ ಬಳಿ ಹೋದಾಗ, ಸೆಂಟಿನೆಲೀಸ್ ಜನಾಂಗದವರಿಂದ ಕೊಲ್ಲಲ್ಪಟ್ಟ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದರ ಜೊತೆಗೆ 2018ರಲ್ಲಿ, ಅಮೇರಿಕನ್ ಕ್ರಿಶ್ಚಿಯನ್ ಮಿಷನರಿ ಜಾನ್ ಅಲೆನ್ ಚೌ ಅವರು ಧರ್ಮ ಪ್ರಚಾರದ ಉದ್ದೇಶದಿಂದ ದ್ವೀಪಕ್ಕೆ ಅಕ್ರಮವಾಗಿ ಪ್ರವೇಶಿಸಿ ಸೆಂಟಿನೆಲೀಸ್ ನಿಂದ ಹತರಾಗಿದ್ದರು.

ಅವರ ಬಗ್ಗೆ ನಿಖರವಾದ ಮಾಹಿತಿ ಬಹಳ ಕಡಿಮೆ. ಏಕೆಂದರೆ ಯಾರೇ ಹೋದರೂ ಹಿಂತಿರುಗಿ ಬರುವ ಅವಕಾಶವಿಲ್ಲದಷ್ಟು ಅಪಾಯಕರವಾಗಿದೆ. ಅವರು ಇನ್ನೂ ಶಿಲಾಯುಗದ ಜೀವನ ಶೈಲಿಯನ್ನು ಮುಂದುವರಿಸಿಕೊಂಡಿದ್ದಾರೆ. ಬೇಟೆ, ಮೀನುಗಾರಿಕೆ ಹಾಗೂ ಕಾಡಿನ ಫಲಗಳಿಂದ ಬದುಕು ನಡೆಸುತ್ತಿದ್ದಾರೆ ಎಂದು ಸಂಶೋಧಕರು ಅಂದಾಜು ಮಾಡಿದ್ದಾರೆ.

ಈ ಜನಾಂಗವನ್ನು ಸಂಪರ್ಕಿಸಲು ಅಥವಾ ಅವರ ಹತ್ತಿರ ಹೋಗಲು ಭಾರತ ಸರ್ಕಾರ ಕಾನೂನುಬದ್ಧವಾಗಿ ನಿಷೇಧ ವಿಧಿಸಿದೆ. ಜೊತೆಗೆ ಉತ್ತರ ಸೆಂಟಿನೆಲ್ ದ್ವೀಪವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿದೆ ಮತ್ತು ಅದರ ಸುತ್ತಲಿನ 3 ಮೈಲುಗಳಷ್ಟು ಪ್ರದೇಶದಲ್ಲಿ ಸಂಚರಿಸುವುದನ್ನು ನಿಷೇಧಿಸಿದೆ. ವಿಜ್ಞಾನಿಗಳು ಹೇಳುವಂತೆ, ಸೆಂಟಿನೆಲೀಸ್ ಜನಾಂಗವು ಜಗತ್ತಿನ ಅತ್ಯಂತ ಪ್ರಾಚೀನ ಹಾಗೂ ರಹಸ್ಯಮಯ ಬುಡಕಟ್ಟುಗಳಲ್ಲಿ ಒಂದಾಗಿದೆ.

ಒಟ್ಟಿನಲ್ಲಿ, ಸೆಂಟಿನೆಲೀಸ್ ಬುಡಕಟ್ಟು ಜನಾಂಗವನ್ನು ಜಗತ್ತಿನ ಅತ್ಯಂತ ಭಯಾನಕ ಹಾಗೂ ಅಪಾಯಕರ ಜನಾಂಗವೆಂದು ಪರಿಗಣಿಸಲಾಗುತ್ತದೆ. ಅವರ ಬಗ್ಗೆ ಕುತೂಹಲ ಜಗತ್ತಿನಲ್ಲಿರುವ ಎಲ್ಲರಲ್ಲೂ ಇದ್ದರೂ, ಅವರನ್ನು ನೇರವಾಗಿ ಭೇಟಿ ಮಾಡುವ ಧೈರ್ಯ ಯಾರಿಗೂ ಇಲ್ಲ ಎಂಬುದು ನಿಜ.

ಇದನ್ನೂ ಓದಿ