Thursday, September 4, 2025

LIFE | ಒಂಟಿ ಜನರ ಅಭ್ಯಾಸಗಳು ಹೀಗಿರುತ್ತಂತೆ! ಹೌದಾ? ನಿವೇನಂತೀರಾ?

ಮನುಷ್ಯರು ಸಹಜವಾಗಿ ಸಮಾಜಜೀವಿಗಳು. ಸಂತೋಷವಾಗಿರಲಿ, ದುಃಖವಾಗಿರಲಿ ನಾವು ಹಂಚಿಕೊಳ್ಳಲು ಒಬ್ಬರನ್ನು ಬಯಸುತ್ತೇವೆ. ಕಷ್ಟದಲ್ಲಿ ಬೆಂಬಲ ನೀಡುವ, ಸಂತೋಷದಲ್ಲಿ ಜೊತೆಯಾಗುವ ಸಂಗಾತಿಯ ಕೊರತೆ ಕೆಲವರ ಜೀವನದಲ್ಲಿ ಕಂಡುಬರುತ್ತದೆ. ಈ ಕೊರತೆಯಿಂದಾಗಿ ಅವರು ಭಾವನೆಗಳನ್ನು ಹಂಚಿಕೊಳ್ಳಲು ಆಪ್ತರಿಲ್ಲದೆ ಒಂಟಿಯಾಗಿ ಬದುಕಬೇಕಾಗುತ್ತದೆ. ಆದರೂ ಇಂತಹ ಜೀವನದಲ್ಲಿ ತಾವು ಸ್ಥಿರತೆ ಮತ್ತು ದೃಢತೆಯನ್ನು ಬೆಳೆಸಿಕೊಳ್ಳುತ್ತಾ ಹೋಗುತ್ತಾರೆ. ಸಂಗಾತಿಯಿಲ್ಲದ ಜನರು ಸಾಮಾನ್ಯವಾಗಿ ಅಳವಡಿಸಿಕೊಳ್ಳುವ ಕೆಲವು ಅಭ್ಯಾಸಗಳನ್ನು ಇಲ್ಲಿದೆ ನೋಡಿ.

ಆಲೋಚನೆ ಮತ್ತು ಭಾವನೆಗಳ ಮೇಲೆ ಕೇಂದ್ರೀಕರಿಸುತ್ತಾರೆ

ಪಾಲುದಾರರಿಲ್ಲದವರು ತಮ್ಮ ಒತ್ತಡ, ದುಃಖವನ್ನು ಹಂಚಿಕೊಳ್ಳುವುದಕ್ಕಿಂತ ಯೋಚನೆ, ಬರವಣಿಗೆ, ಧ್ಯಾನ ಅಥವಾ ಉಸಿರಾಟದ ಅಭ್ಯಾಸಗಳ ಮೂಲಕ ನಿಯಂತ್ರಣ ಸಾಧಿಸುತ್ತಾರೆ. ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ಶಾಂತಿ ನೀಡಿಕೊಳ್ಳುತ್ತಾರೆ.

ದಿನಚರಿಯನ್ನು ಕಟ್ಟಿಕೊಳ್ಳುತ್ತಾರೆ

ಒಂಟಿತನವನ್ನು ನಿಭಾಯಿಸಲು ಇವರು ದಿನಚರಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಬೆಳಗಿನ ವ್ಯಾಯಾಮ, ಸರಿಯಾದ ಆಹಾರ, ಓದು, ಹೊರಸುತ್ತಾಟ ಎಲ್ಲವು ಅವರಿಗೆ ಜೀವನದಲ್ಲಿ ಸ್ಥಿರತೆ ನೀಡುತ್ತವೆ.

ಸ್ನೇಹ ಮತ್ತು ಕೆಲಸದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ

ಜೀವನ ಸಂಗಾತಿಯ ಕೊರತೆಯನ್ನು ಮರೆಸಿಕೊಳ್ಳಲು ಸ್ನೇಹಿತರ ಜೊತೆ ಹೆಚ್ಚು ಸಮಯ ಕಳೆಯುತ್ತಾರೆ. ಕೆಲವರು ಕೆಲಸದಲ್ಲಿ ಮುಳುಗಿಬಿದ್ದು ನಿರಂತರವಾಗಿ ತಮ್ಮನ್ನು ಬ್ಯುಸಿಯಾಗಿ ಇಟ್ಟುಕೊಳ್ಳುತ್ತಾರೆ.\

ಸ್ವತಂತ್ರತೆಯನ್ನು ಬೆಳೆಸಿಕೊಳ್ಳುತ್ತಾರೆ

ಸಂಗಾತಿಯಿಲ್ಲದ ಜನರು ಹೆಚ್ಚು ಸ್ವತಂತ್ರ ಜೀವನಕ್ಕೆ ಒತ್ತು ಕೊಡುತ್ತಾರೆ. ಇವರು ಯಾರಿಗೂ ಅವಲಂಬಿಸದೆ ಬದುಕಲು ಪ್ರಯತ್ನಿಸುತ್ತಾರೆ. ಆದರೆ ಇದರಿಂದ ಸಹಾಯ ಕೇಳಲು ಹಿಂಜರಿಕೆ, ಇತರರನ್ನು ನಂಬದಿರುವ ಗುಣ ಬೆಳೆಯುವ ಸಾಧ್ಯತೆಯೂ ಇದೆ.

ಪರ್ಯಾಯಗಳನ್ನು ಹುಡುಕುತ್ತಾರೆ

ಸಂಗಾತಿಯ ಕೊರತೆಯನ್ನು ಮರೆಸಿಕೊಳ್ಳಲು ಸಾಕುಪ್ರಾಣಿಗಳು, ಆನ್‌ಲೈನ್ ಸಮುದಾಯಗಳು ಅಥವಾ ಸಾರ್ವಜನಿಕ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸುತ್ತಾರೆ. ಇವು ಅವರಿಗೆ ಭಾವನೆ ಹಂಚಿಕೊಳ್ಳುವ ಪರ್ಯಾಯವಾಗುತ್ತವೆ.

ಸ್ವಯಂ ಅರಿವು ಬೆಳೆಸಿಕೊಳ್ಳುತ್ತಾರೆ

ಪಾಲುದಾರರಿಲ್ಲದವರು ತಮ್ಮ ಜೀವನದ ಗುರುಗಳಾಗಿಯೇ ತಾವು ನಡೆದುಕೊಳ್ಳುತ್ತಾರೆ. ತಮ್ಮ ಭಾವನೆಗಳನ್ನು ವಿಶ್ಲೇಷಿಸಲು ಸಮಯ ತೆಗೆದುಕೊಳ್ಳುತ್ತಾರೆ. ಮೈಂಡ್‌ಫುಲ್‌ನೆಸ್, ಸ್ವಯಂ-ಚಿಂತನೆ, ಸ್ವ-ಸಹಾಯದ ಮೂಲಕ ತಮ್ಮ ವ್ಯಕ್ತಿತ್ವವನ್ನು ಬೆಳೆಸುತ್ತಾರೆ.

ಇದನ್ನೂ ಓದಿ