ನಮ್ಮ ತ್ವಚೆಯ ಆರೋಗ್ಯ ನಮ್ಮ ಆತ್ಮವಿಶ್ವಾಸದ ಪ್ರಮುಖ ಅಂಶ. ಸಣ್ಣದೊಂದು ಮೊಡವೆ ಬಂದರೂ ನಾವು ತುಂಬಾ ಟೆನ್ಶನ್ ಮಾಡಿಕೊಳ್ತೇವೆ. ಚರ್ಮವನ್ನು ಆರೋಗ್ಯವಾಗಿಡಲು ಹಣ್ಣುಗಳು ಪ್ರಮುಖ ಪಾತ್ರ ವಹಿಸುತ್ತವೆ ಅನ್ನೋದು ಎಲ್ಲರಿಗು ಗೊತ್ತು. ವಿಶೇಷವಾಗಿ ಬ್ಲೂಬೆರಿ ಮತ್ತು ಬೆಟ್ಟದ ನೆಲ್ಲಿಕಾಯಿ ಎರಡೂ ತ್ವಚೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಹಾಗೂ ಕಾಂತಿ ಹೆಚ್ಚಿಸಲು ಸಹಕಾರಿ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಡುತ್ತಾರೆ.
ಬ್ಲೂಬೆರಿ ಪೋಷಕಾಂಶಗಳು ಮತ್ತು ಲಾಭಗಳು
ಬ್ಲೂಬೆರಿ ಹಣ್ಣಿನಲ್ಲಿ ಆಂಥೊಸಯಾನಿನ್ ಎಂಬ ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳು ಇವೆ. ಇದೇ ಕಾರಣಕ್ಕೆ ಹಣ್ಣಿಗೆ ನೀಲಿ ಬಣ್ಣ ಬರುತ್ತದೆ. ಈ ಅಂಶಗಳು ಚರ್ಮದ ಮೇಲೆ ವಯಸ್ಸಿನ ಗುರುತು ಕಾಣಿಸದಂತೆ ತಡೆಯುತ್ತವೆ. ಜೊತೆಗೆ, ಬ್ಲೂಬೆರಿಯಲ್ಲಿ ವಿಟಮಿನ್ C ಮತ್ತು ವಿಟಮಿನ್ K ಸಮೃದ್ಧವಾಗಿದ್ದು, ಚರ್ಮಕ್ಕೆ ಪುನಶ್ಚೈತನ್ಯ ನೀಡುತ್ತದೆ. ಫೈಬರ್ ಅಂಶವೂ ಹೆಚ್ಚಿರುವುದರಿಂದ ಚರ್ಮದ ಒಟ್ಟಾರೆ ಆರೋಗ್ಯವನ್ನು ಕಾಪಾಡುವಲ್ಲಿ ಇದು ನೆರವಾಗುತ್ತದೆ.

ಬೆಟ್ಟದ ನೆಲ್ಲಿಕಾಯಿಯ ಪೋಷಕಾಂಶಗಳು
ನೆಲ್ಲಿಕಾಯಿ ಚರ್ಮದ ಆರೋಗ್ಯಕ್ಕೆ ಆಯುರ್ವೇದದಲ್ಲಿ ಶತಮಾನಗಳಿಂದ ಬಳಸಲ್ಪಡುತ್ತಿದೆ. ಇದರಲ್ಲಿ ವಿಟಮಿನ್ C ತುಂಬಾ ಪ್ರಮಾಣದಲ್ಲಿದ್ದು, ಚರ್ಮಕ್ಕೆ ಪ್ರಕಾಶಮಾನವಾದ ಕಾಂತಿ ನೀಡುತ್ತದೆ. ಅಲ್ಲದೆ, ಪಾಲಿಫಿನಾಲ್‌ಗಳು ಚರ್ಮದ ಉರಿಯೂತವನ್ನು ಕಡಿಮೆ ಮಾಡುತ್ತವೆ. ಕ್ಯಾಲ್ಸಿಯಂ, ಐರನ್ ಮತ್ತು ಫಾಸ್ಫರಸ್‌ಗಳಂತಹ ಖನಿಜಗಳು ಚರ್ಮದ ಆರೋಗ್ಯವನ್ನು ಒಳಗಿನಿಂದ ಬಲಪಡಿಸುತ್ತವೆ.

ಚರ್ಮಕ್ಕೆ ನೈಸರ್ಗಿಕ ಫೇಸ್‌ಮಾಸ್ಕ್
ಬ್ಲೂಬೆರಿ ಮತ್ತು ನೆಲ್ಲಿಕಾಯಿಯನ್ನು ಪೇಸ್ಟ್ ಮಾಡಿ ಮುಖಕ್ಕೆ ಫೇಸ್‌ಮಾಸ್ಕ್ ರೂಪದಲ್ಲಿ ಹಚ್ಚಬಹುದು. ಇದನ್ನು 30 ನಿಮಿಷ ಬಿಟ್ಟು ತೊಳೆಯುವುದರಿಂದ ಚರ್ಮದ ತೇವಾಂಶ ಹೆಚ್ಚುತ್ತದೆ, ಮೊಡವೆಗಳ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ಕಾಂತಿ ಸಹ ಹೊಳೆಯುತ್ತದೆ.

ಬ್ಲೂಬೆರಿ ಮತ್ತು ನೆಲ್ಲಿಕಾಯಿ ಎರಡೂ ತ್ವಚೆಯ ಆರೋಗ್ಯಕ್ಕೆ ಸಮಾನವಾಗಿ ಸಹಕಾರಿ. ಇವುಗಳನ್ನು ಆಹಾರದಲ್ಲಿ ನಿಯಮಿತವಾಗಿ ಸೇರಿಸಿಕೊಳ್ಳುವುದರ ಜೊತೆಗೆ, ಮುಖಕ್ಕೆ ಫೇಸ್‌ಮಾಸ್ಕ್ ರೂಪದಲ್ಲೂ ಬಳಸುವುದರಿಂದ ಚರ್ಮ ಆರೋಗ್ಯವಾಗಿದ್ದು ಪ್ರಕಾಶಮಾನವಾಗಿ ಕಾಣುತ್ತದೆ. ನೈಸರ್ಗಿಕ ಪರಿಹಾರಗಳ ಮೂಲಕ ತ್ವಚೆಯ ಕಾಳಜಿ ವಹಿಸುವುದು ಯಾವಾಗಲೂ ಉತ್ತಮ.