Thursday, September 4, 2025

ಸಹೋದ್ಯೋಗಿ ಜೊತೆ ರೊಮ್ಯಾಂಟಿಕ್‌ ರಿಲೇಷನ್‌ಶಿಪ್! ನೆಸ್ಲೆ ಸಿಇಒ ಲಾರೆಂಟ್ ವಜಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತನ್ನ ಕೈಕೆಳಗೆ ಕೆಲಸ ಮಾಡುವ ಮತ್ತು ತನಗೆ ನೇರವಾಗಿ ರಿಪೋರ್ಟ್ ಮಾಡುವ ಸಹೋದ್ಯೊಗಿ ಮಹಿಳೆಯೊಂದಿಗೆ ಪ್ರೇಮ ಸಂಬಂಧ ಇರಿಸಿಕೊಂಡಿದ್ದ ನೆಸ್ಲೆ ಸಿಇಒ ಲಾರೆಂಟ್ ಫ್ರೀಕ್ಸ್ ಅವರನ್ನು ವಜಾಗೊಳಿಸಲಾಗಿದೆ.

ಸಹೋದ್ಯೋಗಿ ಜೊತೆಗಿನ ಸಂಬಂಧವನ್ನು ಮುಚ್ಚಿಟ್ಟ ಕಾರಣಕ್ಕೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ನೆಸ್ಸೆ ಕಂಪನಿಯಲ್ಲೇ ಹಿರಿಯ ಎಕ್ಸಿಕ್ಯೂಟಿವ್ ಆಗಿರುವ ಫಿಲಿಪ್ ನವ್ರಾಟಿಲ್ ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಲಾಗಿದೆ.

ಸ್ವಿಟ್ಜರ್​ಲ್ಯಾಂಡ್ ಮೂಲದ ನೆಸ್ಲೆ ಕಂಪನಿಯಲ್ಲೇ ಸಹೋದ್ಯೋಗಿ ಜೊತೆ ಲಾರೆಂಟ್ ಫ್ರೀಕ್ಸೆ ಅವರಿಗೆ ರೋಮ್ಯಾಂಟಿಕ್ ರಿಲೇಶನ್​ಶಿಪ್ ಇರುವುದಾಗಿ ರಹಸ್ಯವಾಗಿ ದೂರೊಂದು ದಾಖಲಾಗಿತ್ತು. ಕಂಪನಿಯ ಛೇರ್ಮನ್ ಪೌಲ್ ಬುಲ್ಕೆ ಮತ್ತು ಸ್ವತಂತ್ರ ನಿರ್ದೇಶಕ ಪಾಬ್ಲೊ ಇಸ್ಲಾ ಅವರ ಕಣ್ಗಾವಲಿನಲ್ಲಿ ಆಂತರಿಕ ಮತ್ತು ಬಾಹ್ಯ ತನಿಖೆ ನಡೆಸಲಾಯಿತು. ಅದರಲ್ಲಿ ಲಾರೆಂಟ್ ಅವರು ಸಹೋದ್ಯೋಗಿ ಜೊತೆ ಸಂಬಂಧ ಹೊಂದಿರುವುದು ಜಾಹೀರಾಗಿದೆ. ನಂತರ ಅವರನ್ನು ತತ್​ಕ್ಷಣದಿಂದಲೇ ಜಾರಿಗೆ ಬರುವಂತೆ ಸಿಇಒ ಸ್ಥಾನದಿಂದ ವಜಾಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.

ಇದನ್ನೂ ಓದಿ