Tuesday, October 21, 2025

ಅಭಿಮಾನ್ ಸ್ಟುಡಿಯೋದಲ್ಲಿ ಜಾಗ, ವಿಷ್ಣುವರ್ಧನ್‌ಗೆ ಕರ್ನಾಟಕ ರತ್ನ ಕೊಡಿ : ಸಿಎಂಗೆ ಭಾರತಿ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಭಿಮಾನ್‌ ಸ್ಟುಡಿಯೋದಲ್ಲಿ ವಿಷ್ಣುವರ್ಧನ್‌ ಅವರಿಗಾಗಿ ಜಾಗ ಕೊಡಿ, ಅವರಿಗೆ ಕರ್ನಾಟಕ ರತ್ನ ನೀಡಿ ಎಂದು ಸಿಎಂ ಸಿದ್ದರಾಮಯ್ಯಗೆ ನಟಿ, ವಿಷ್ಣುವರ್ಧನ್‌ ಪತ್ನಿ ಭಾರತಿ ಮನವಿ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ‘ಅಭಿಮಾನಿಗಳಿಗಾಗಿ ಸ್ಟುಡಿಯೋದಲ್ಲಿ ಜಾಗ ಕೊಡಿ ಎಂದು ಸಿಎಂ ಬಳಿ ಕೇಳಿದ್ದೇವೆ. ಅಭಿಮಾನಿಗಳ ಬಂದು ನಮಸ್ಕಾರ ಮಾಡಿ ಹೋಗಲು ಅವಕಾಶ ಮಾಡಿ ಕೊಡಬೇಕು ಎಂಬುದು ನಮ್ಮ ಮನವಿ’ ಎಂದಿದ್ದಾರೆ ಭಾರತಿ.

ವಿಷ್ಣುವರ್ಧನ್​ಗೆ ಕರ್ನಾಟಕ ರತ್ನ ಕೊಡಬೇಕು ಎಂಬುದು ಹಲವು ವರ್ಷಗಳ ಕೋರಿಕೆ. ಅಭಿಮಾನಿಗಳು ಈ ಬೇಡಿಕೆಯನ್ನು ಸರ್ಕಾರದ ಮಂದೆ ಇಡುತ್ತಲೇ ಬರುತ್ತಿದ್ದರು. ಈಗ ಅಭಿಮಾನಿಗಳ ಪರವಾಗಿ ಭಾರತಿ ಕೂಡ ಈ ರೀತಿಯ ಮನವಿ ಮಾಡಿದ್ದಾರೆ. ‘ಕರ್ನಾಟಕ ರತ್ನ ಕೊಡಬೇಕು ಎಂದು ನಾನು ಕೇಳುವುದಿಲ್ಲ. ಅಭಿಮಾನಿಗಳು ಕೇಳುತ್ತಿದ್ದಾರೆ. ಅವರ ಕೋರಿಕೆಯನ್ನು ಈಡೇರಿಸಬೇಕು’ ಎಂದು ಭಾರತಿ ಸಿಎಂ ಬಳಿ ಹೇಳಿದ್ದಾರೆ.

error: Content is protected !!