Friday, September 5, 2025

FOOD | ಕ್ಯಾಬೇಜ್ ಗೋಬಿ ಅಲ್ಲ, ಪಾಲಕ್ ಮಂಚೂರಿಯನ್ ಇದು! ಒಮ್ಮೆ ಟ್ರೈ ಮಾಡ್ಲೇಬೇಕು…

ಮಂಚೂರಿಯನ್ ಅನ್ನೋದು ಚೈನೀಸ್ ಖಾದ್ಯಗಳಲ್ಲಿ ಬಹಳ ಪ್ರಸಿದ್ಧ. ಆದರೆ ನಮ್ಮ ದೇಶೀಯ ರುಚಿಗೆ ತಕ್ಕಂತೆ ಅದಕ್ಕೆ ಸ್ವಲ್ಪ ಇಂಡಿಯನ್ ಟಚ್ ಕೊಟ್ಟರೆ ಅದ್ಭುತ ತಿನಿಸು ಸಿಗುತ್ತದೆ. ಅದರಲ್ಲೂ ಪಾಲಕ್ ಮಂಚೂರಿಯನ್ ಅಂದರೆ ಆರೋಗ್ಯಕರವಾದ ಸೊಪ್ಪಿನಿಂದ ಸಿದ್ಧವಾಗುವ, ಸ್ವಲ್ಪ ಸ್ಪೈಸಿ–ಸ್ವಲ್ಪ ಕ್ರಿಸ್ಪಿ ಖಾದ್ಯ. ಇದನ್ನು ಸ್ನಾಕ್ಸ್ ಆಗಿ, ಪಾರ್ಟಿ ಸ್ಟಾರ್ಟರ್ ಆಗಿ ಅಥವಾ ರೈಸ್ ಜೊತೆಗೂ ಸವಿಯಬಹುದು. ಈಗ ಈ ರುಚಿಕರವಾದ ಪಾಲಕ್ ಮಂಚೂರಿಯನ್ ಹೇಗೆ ಮಾಡೋದು ನೋಡೋಣ.

ಬೇಕಾಗುವ ಸಾಮಗ್ರಿಗಳು

ಪಾಲಕ್ ಸೊಪ್ಪು – 1 ಕಟ್ಟು
ಮೆಣಸಿನ ಪುಡಿ – 1 ಚಮಚ
ಜೋಳದ ಹಿಟ್ಟು – 4 ಚಮಚ
ಅಕ್ಕಿ ಹಿಟ್ಟು – 2 ಚಮಚ
ಹಸಿಮೆಣಸು – 2 (
ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಈರುಳ್ಳಿ – 1
ಕ್ಯಾಪ್ಸಿಕಂ – ½ ಕಪ್
ಟೊಮಾಟೊ ಸಾಸ್ – 2 ಚಮಚ
ಸೋಯಾ ಸಾಸ್ – 1 ಚಮಚ
ಚಿಲ್ಲಿ ಸಾಸ್ – 1 ಚಮಚ
ಎಣ್ಣೆ – ಕರಿಯಲು ಬೇಕಾದಷ್ಟು
ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಮೊದಲು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು, ಸಣ್ಣದಾಗಿ ಕತ್ತರಿಸಿಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಪಾಲಕ್, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ ಹಾಗೂ ಉಪ್ಪು ಹಾಕಿ ಚೆನ್ನಾಗಿ ಕಲಸಿ. ಸ್ವಲ್ಪ ನೀರು ಹಾಕಿ ಮಿಶ್ರಣ ತಯಾರಿಸಿಕೊಳ್ಳಿ. ಇದರಿಂದ ಸಣ್ಣ ಸಣ್ಣ ಉಂಡೆ ಮಾಡಿ ಬಿಸಿ ಎಣ್ಣೆಯಲ್ಲಿ ಕರಿಯಿರಿ.

ಈಗ ಬೇರೆ ಬಾಣಲೆಯಲ್ಲೇ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಶುಂಠಿ–ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸು, ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಬಾಡಿಸಿ. ಈಗ ಅದಕ್ಕೆ ಟೊಮಾಟೊ ಸಾಸ್, ಸೋಯಾ ಸಾಸ್, ಚಿಲ್ಲಿ ಸಾಸ್ ಹಾಕಿ ಮಿಶ್ರಣ ಮಾಡಿ. ಕೊನೆಗೆ ಕರಿದ ಪಾಲಕ್ ಉಂಡೆಗಳನ್ನು ಅದರಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಬಿಸಿ ಬಿಸಿ ಸವಿಯಿರಿ.

ಇದನ್ನೂ ಓದಿ