Friday, September 5, 2025

‘ಕಾಂತಾರ ಚಾಪ್ಟರ್-1′ ರಿಲೀಸ್ ಗೆ ಕೌಂಟ್‌ಡೌನ್: ‘ಎಎ ಫಿಲಂಸ್’ ತೆಕ್ಕೆಗೆ ನಾರ್ಥ್ ಇಂಡಿಯಾ ರೈಟ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂತಾರ ಚಾಪ್ಟರ್-1′ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಮೂಡಿಬರ್ತಿರೋ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವಕಾಂತಾರ ಚಾಪ್ಟರ್-1′ಅಕ್ಟೋಬರ್ 2, 2025 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ.

2022ರ ಬ್ಲಾಕ್‌ಬಸ್ಟರ್ `ಕಾಂತಾರ’ ಸಿನಿಮಾದ ಈ ಬಹು ನಿರೀಕ್ಷಿತ ಪ್ರಿಕ್ವೆಲ್ ಈಗಾಗಲೇ ದೇಶಾದ್ಯಂತ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿದೆ. ಕಾಂತಾರ ಚಾಪ್ಟರ್-1ರ ಉತ್ತರ ಭಾರತದಾದ್ಯಂತ ವಿತರಣೆಯನ್ನು ʻಎಎ ಫಿಲಂಸ್’ (AA Films) ವಹಿಸಿಕೊಂಡಿದ್ದು, ಹಿಂದಿ ಮಾತನಾಡುವ ಪ್ರದೇಶಗಳಲ್ಲೂ ಈ ಚಿತ್ರ ಬೆಳ್ಳಿ ಪರದೆಯ ಮೇಲೆ ಪ್ರದರ್ಶನಗೊಳ್ಳಲಿದೆ.

ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿದ್ದು, ಕ್ರಿ.ಶ 4ನೇ ಶತಮಾನದ ಸಂಸ್ಕೃತಿ ಮತ್ತು ವೈಭವವನ್ನು ತೆರೆಯ ಮೇಲೆ ತರುವ ಪ್ರಯತ್ನ ಚಿತ್ರತಂಡದ್ದಾಗಿದೆ.

ಕಾಂತಾರ ಚಾಪ್ಟರ್-1 ಚಿತ್ರ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಪ್ರಾದೇಶಿಕ ಕಥೆಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಹೊಂಬಾಳೆ ಫಿಲಂಸ್‌ನ ದೃಷ್ಟಿಕೋನವನ್ನು ಇದು ಮತ್ತಷ್ಟು ಬಲಪಡಿಸಲಿದೆ.

ಇದನ್ನೂ ಓದಿ