Saturday, September 6, 2025

FOOD | ಸ್ವೀಟ್ ಕಾರ್ನ್ ಪಡ್ಡು ತಿಂದಿದ್ದೀರಾ? ಇಲ್ಲಿದೆ ಸಿಂಪಲ್ ರೆಸಿಪಿ!

ಬೆಳಗಿನ ಉಪಹಾರದಲ್ಲಿ ಯಾವಾಗಲೂ ಒಂದೇ ತರಹದ ತಿನಿಸು ತಿಂದ್ರೆ ಬೋರ್ ಆಗೋದು ಖಂಡಿತ. ಆದ್ದರಿಂದ ನಾವೇನಾದರೂ ಹೊಸ ರುಚಿಯ ತಿನಿಸು ಮಾಡಿದರೆ ಎಲ್ಲರಿಗೂ ಇಷ್ಟವಾಗುತ್ತದೆ. ಅಂಥದೇ ಒಂದು ಸುಲಭ ಹಾಗೂ ರುಚಿಯಾದ ಉಪಹಾರ ಎಂದರೆ ಸ್ವೀಟ್ ಕಾರ್ನ್ ಪಡ್ಡು. ಇದು ಪೌಷ್ಟಿಕಾಂಶಗಳಿಂದ ಕೂಡಿದ್ದು, ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಸವಿಯುವಂತಹ ಉಪಹಾರ. ಬಿಸಿ ಬಿಸಿ ಚಟ್ನಿ ಜೊತೆ ತಿಂದರೆ ಇದರ ರುಚಿ ಇನ್ನಷ್ಟು ಹೆಚ್ಚುತ್ತದೆ.

ಬೇಕಾಗುವ ಸಾಮಗ್ರಿಗಳು:

ಸ್ವೀಟ್ ಕಾರ್ನ್ – 1 ಕಪ್
ಅಕ್ಕಿ – 1 ಕಪ್ (ನೆನೆಸಿದದ್ದು)
ಹುರಿದ ಕಡಲೆ ಬೇಳೆ – 2 ಟೇಬಲ್ ಸ್ಪೂನ್
ಹಸಿಮೆಣಸು – 2
ಶುಂಠಿ – 1 ಇಂಚು ತುಂಡು
ಕರಿಬೇವು – 1 ಟೇಬಲ್ ಸ್ಪೂನ್
ಕೊತ್ತಂಬರಿ ಸೊಪ್ಪು – 2 ಟೇಬಲ್ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಎಣ್ಣೆ – ಬೇಯಿಸಲು

ತಯಾರಿಸುವ ವಿಧಾನ:

ಮೊದಲು ಅಕ್ಕಿಯನ್ನು 3–4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಮಿಕ್ಸರ್‌ನಲ್ಲಿ ನೆನೆಸಿದ ಅಕ್ಕಿ, ಸ್ವೀಟ್ ಕಾರ್ನ್, ಹಸಿಮೆಣಸು, ಶುಂಠಿ, ಹುರಿದ ಕಡಲೆ ಬೇಳೆ ಸೇರಿಸಿ ಮೃದುವಾದ ಹಿಟ್ಟಿನಂತೆ ಅರೆದುಕೊಳ್ಳಿ.

ಈ ಹಿಟ್ಟಿಗೆ ಉಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವು ಸೇರಿಸಿ ಚೆನ್ನಾಗಿ ಕಲಸಿ. ಈಗ ಪಡ್ಡು ಮಾಡುವ ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ತಯಾರಿಸಿದ ಹಿಟ್ಟನ್ನು ಅದರಲ್ಲಿ ಹಾಕಿ ಮುಚ್ಚಿ ಬೇಯಿಸಿ. ಒಂದು ಬದಿ ಚೆನ್ನಾಗಿ ಬಣ್ಣ ಬಂದ ನಂತರ ತಿರುಗಿಸಿ ಮತ್ತೊಂದು ಬದಿಯೂ ಬೇಯಿಸಿಕೊಳ್ಳಿ.

ಇದನ್ನೂ ಓದಿ