Monday, December 22, 2025

ನಟಿ ಭಾವನಾ ಅವಳಿ IVF ಶಿಶುಗಳಲ್ಲಿ ಒಂದು ಮಗು ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಭಾವನಾ ರಾಮಣ್ಣ ಅವರ ಅವಳಿ IVF ಶಿಶುಗಳಲ್ಲಿ ಒಂದು ಮಗು ಸಾವನ್ನಪ್ಪಿದೆ.

ಐವಿಎಫ್ ಮೂಲಕ ಮಗು ಮಾಡಿಕೊಳ್ಳಲು ಮುಂದಾಗಿದ್ದ ಭಾವನಾಗೆ ಎರಡು ವಾರದ ಹಿಂದೆ ಹೆರಿಗೆ ಆಗಿದೆ. ಹೆರಿಗೆ ಸಂದರ್ಭದಲ್ಲೇ ಒಂದು ಮಗು ಮೃತಪಟ್ಟಿದೆ. ಇನ್ನೊಂದು ಒಂದು ಮಗು ಆರೋಗ್ಯವಾಗಿದೆ. ಹೆಣ್ಣು ಮಗುವಿಗೆ ನಟಿ ಭಾವನಾ ತಾಯಿ ಆಗಿದ್ದಾರೆ.

ಮಾಹಿತಿಗಳ ಪ್ರಕಾರ, ನಟಿ ಭಾವನಾ ಗರ್ಭಿಣಿಯಾಗಿ 7 ತಿಂಗಳ ಪೂರ್ಣಗೊಳಿಸುತ್ತಿದ್ದಂತೆಯೇ ಒಂದು ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರ ಸೂಚನೆಯಂತೆ 8 ತಿಂಗಳಿಗೆ ಹೆರಿಗೆ ಮಾಡಿಸಲಾಗಿದೆ. ಈ ವೇಳೆ ಒಂದು ಮಗು ಮೃತಪಟ್ಟಿದೆ.

ಇತ್ತೀಚೆಗೆ ಭಾವನಾ ರಾಮಣ್ಣ ಅವರ ಮನೆಯಲ್ಲಿ ಅದ್ಧೂರಿಯಾಗಿ ಸೀಮಂತ ಶಾಸ್ತ್ರ ನಡೆದಿತ್ತು.

error: Content is protected !!