Sunday, December 21, 2025

ದೆಹಲಿಯಲ್ಲಿ ಮಳೆ ಆರ್ಭಟ: ಪ್ರಮುಖ ರಸ್ತೆಗಳೇ ಜಲಾವೃತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ನಗರದ ಪ್ರಮುಖ ಭಾಗಗಳು ಮಳೆ ನೀರಿನಿಂದ ಆವೃತವಾಗಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ದೆಹಲಿಯಲ್ಲಿ ಕಾರ್ಮೋಡ ಆವರಿಸಿ ಮಳೆ ಸುರಿಯುತ್ತಿದೆ. ನಿರಂತರ ಮಳೆಯು ತೀವ್ರ ಶಾಖ ಮತ್ತು ಹೆಚ್ಚಿನ ಮಾಲಿನ್ಯ ಮಟ್ಟವನ್ನು ಇಳಿಸಿದೆ. ಇಂಡಿಯಾ ಗೇಟ್, ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಮಂಡಿ ಹೌಸ್, ತುಘಲಕ್ ರಸ್ತೆ ಮತ್ತು ನಗರದ ಹಲವಾರು ಭಾಗಗಳು ನೀರಿನಿಂದ ಆವೃತವಾಗಿವೆ. ನೆರೆಯ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿಯೂ ಸಹ ಭಾರೀ ಮಳೆಯಾಗುತ್ತಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದೆಹಲಿಗೆ ಆರೆಂಜ್‌ ಅಲರ್ಟ್‌ ಘೋಷಿಸಿತ್ತು. ಗುಡುಗು ಸಹಿತ ಮಧ್ಯಮ ಮಳೆ (ಗಂಟೆಗೆ 5-15 ಮಿಮೀ) ಮುನ್ಸೂಚನೆ ನೀಡಿತ್ತು. ಬೆಳಗ್ಗೆ ಮಳೆ ನೀರು ನಿಂತಿದ್ದರಿಂದ ವಿವಿಧ ಸ್ಥಳಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಮಹಾಮಾಯ ಮೇಲ್ಸೇತುವೆಯ ಕೆಳಗಿರುವ ರಸ್ತೆ ಮತ್ತು ಅಂಬೇಡ್ಕರ್ ಪಾರ್ಕ್ ಬಳಿಯ ರಸ್ತೆ ಕೂಡ ಜಲಾವೃತವಾಗಿದೆ.

 
error: Content is protected !!