Sunday, September 7, 2025

ಆತನ ಬಾಯಲ್ಲಿ ಆಸಿಡ್‌ ಹಾಕಿ ಸುಟ್ಟು ಬಿಡುತ್ತೇನೆ: ಬಿಜೆಪಿ ಶಾಸಕನಿಗೆ ಬೆದರಿಕೆ ಹಾಕಿದ ಟಿಎಂಸಿ ನಾಯಕ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದ ಬಿಜೆಪಿ ಶಾಸಕನ ಬಾಯಿಗೆ ಆಸಿಡ್ ಸುರಿಯುವುದಾಗಿ ಟಿಎಂಸಿ ನಾಯಕ ರಹೀಮ್ ಬಕ್ಷಿ ನಾಲಿಗೆ ಹರಿಬಿಟ್ಟಿದ್ದು,ದೊಡ್ಡ ವಿವಾದವನ್ನೇ ಸೃಷ್ಟಿಸಿದೆ.

ಬಕ್ಷಿ ಮಾಲ್ಡಾ ಜಿಲ್ಲೆಯ ಟಿಎಂಸಿ ಅಧ್ಯಕ್ಷರಾಗಿದ್ದು, ದೇಶದ ಇತರ ಭಾಗಗಳಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರ ಮೇಲಿನ ದೌರ್ಜನ್ಯವನ್ನು ಖಂಡಿಸಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಿಜೆಪಿ ಶಾಸಕ ಶಂಕರ್ ಘೋಷ್ ಅವರ ಹೆಸರನ್ನು ಉಲ್ಲೇಖಿಸದೆ ವಾಗ್ದಾಳಿ ನಡೆಸಿದರು. ವಿಧಾನಸಭೆಯಲ್ಲಿ ಅವರು ರಾಜ್ಯದಿಂದ ವಲಸೆ ಬಂದ ಕಾರ್ಮಿಕರನ್ನು “ರೋಹಿಂಗ್ಯರು” ಅಥವಾ “ಬಾಂಗ್ಲಾದೇಶಿಗಳು” ಎಂದು ಕರೆದರು ಎಂದು ವಾಗ್ದಾಳಿ ನಡೆಸಿದರು.

ಹೊರಗೆ ಕೆಲಸ ಮಾಡುವ ಬಂಗಾಳದ 30 ಲಕ್ಷ ವಲಸೆ ಕಾರ್ಮಿಕರು ಬಂಗಾಳಿಗಳಲ್ಲ. ಅವರು ರೋಹಿಂಗ್ಯರು, ಅವರು ಬಾಂಗ್ಲಾದೇಶಿಗಳು ಎಂದು ನಾಚಿಕೆಯಿಲ್ಲದೆ ಆತ ಹೇಳುತ್ತಾನೆ. ಆತನಿಂದ ಮತ್ತೊಂದು ಮಾತು ಬಂದರೆ, ನಾನು ಆತನ ಬಾಯಲ್ಲಿ ಆಸಿಡ್‌ ಹಾಕಿ ಸುಟ್ಟು ಬಿಡುತ್ತೇನೆ. ಇದು ಪಶ್ಚಿಮ ಬಂಗಾಳ ಎಂದು ನೀವು ತಿಳಿದುಕೊಳ್ಳಬೇಕು. ನಾವು ಬಂಗಾಳಿಗಳು ನಿಮಗೆ ಮಾತನಾಡಲು ಸ್ಥಳ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.

https://x.com/TusharKantiBJP/status/1964554174563307670?ref_src=twsrc%5Etfw%7Ctwcamp%5Etweetembed%7Ctwterm%5E1964554174563307670%7Ctwgr%5E419db6b672fdc7c50e95ff6a20a527f4ec8caa1d%7Ctwcon%5Es1_&ref_url=https%3A%2F%2Fvishwavani.news%2F%2Fnational%2Fwill-burn-your-face-with-acid-tmc-leaders-shocking-threat-to-bjp-mla-draws-condemnation-54205.html

ಇತ್ತ ಟಿಎಂಸಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, ಇಂತಹ ಬೆದರಿಕೆಗಳು ಟಿಎಂಸಿ ರಾಜಕೀಯದ ಪ್ರತಿಬಿಂಬವಾಗಿದೆ ಎಂದು ಹೇಳಿದೆ. ಇದೇ ವ್ಯಕ್ತಿ ಕೆಲವು ವರ್ಷಗಳ ಹಿಂದೆ ಬಿಜೆಪಿ, ಸಿಪಿಐ(ಎಂ) ಮತ್ತು ಕಾಂಗ್ರೆಸ್ ಕಾರ್ಯಕರ್ತರ ಕೈಕಾಲುಗಳನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದ. ಟಿಎಂಸಿಗೆ ಈ ರೀತಿಯ ಹಿಂಸಾತ್ಮಕ ಹೇಳಿಕೆ ಹೊಸತಲ್ಲ. ಅದು ಅವರ ರಾಜಕೀಯ ಸಂಸ್ಕೃತಿ. ಮತ್ತು ಅಕ್ರಮ ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳು ಮಮತಾ ಬ್ಯಾನರ್ಜಿಯವರ ಮತ ಬ್ಯಾಂಕ್‌ಗಳು ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

ಇದನ್ನೂ ಓದಿ