Wednesday, November 5, 2025

ವಿಷ ಕೊಡಿ ಎನ್ನುವಷ್ಟು ಕಷ್ಟನಾ? ಜೈಲಿನಲ್ಲಿ ದರ್ಶನ್‌ ಸಮಸ್ಯೆ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಇಂದು ಕೋರ್ಟ್ ವಿಚಾರಣೆ ವೇಳೆ, ನನಗೆ ಸ್ವಲ್ಪ ಪಾಯಿಸನ್ ತೆಗೆದುಕೊಳ್ಳಲು ಅನುಮತಿ ಕೊಡಿ ಎಂದು ಬೇಡಿದ್ದಾರೆ.

ಜೈಲಿನಲ್ಲಿ ನಾನಾ ಸಮಸ್ಯೆಗಳಾಗುತ್ತಿದ್ದು, ಈ ನರಕ ತಡೆದುಕೊಳ್ಳಲು ಆಗುತ್ತಿಲ್ಲ. ದಯವಿಟ್ಟು ವಿಷ ಕೊಡಿ, ಕುಡಿದು ಸತ್ತುಹೋಗುತ್ತೇನೆ ಎಂದು ದರ್ಶನ್‌ ಹೇಳಿಕೊಂಡಿದ್ದಾರೆ.

ಏನು ಸಮಸ್ಯೆ??

ಬಿಸಿಲು ನೋಡಿ ಬಹಳ ದಿನ ಆಯಿತು. ಬಟ್ಟೆಗಳೆಲ್ಲಾ ವಾಸನೆ ಬರುತ್ತಿದೆ. ಬದುಕಲು ಆಗುತ್ತಿಲ್ಲ. ನನಗೆ ಒಬ್ಬನಿಗೆ ಮಾತ್ರ ಪಾಯಿಸನ್ ಕೊಡಿ ಎಂದಿದ್ದಾರೆ. ಜೈಲಿನ ರೂಮಿನಿಂದ ಈಗ ಮೊದಲಿನಂತೆ ಹೊರಗೆ ಬಿಡುತ್ತಿಲ್ಲ. ಊಟವನ್ನು ಕೂಡ ನೇರವಾಗಿ ರೂಮ್‌ಗೆ ತಲುಪಿಸಲಾಗುತ್ತಿದೆ. ಒಂದು ಕ್ಷಣವೂ ಜೈಲಿನ ತನ್ನ ಕೊಠಡಿ ಬಿಟ್ಟು ಹೊರಬರಲು ಅವಕಾಶ ಕೊಟ್ಟಿಲ್ಲ. 

error: Content is protected !!