ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿವಂಗತ ಉದ್ಯಮಿ ಸಂಜಯ್ ಕಪೂರ್ ಅವರ ಅಂದಾಜು ರೂ. 30,000 ಕೋಟಿ ಮೊತ್ತದ ಎಸ್ಟೇಟ್ ನಲ್ಲಿ ನ್ಯಾಯಯುತ ಪಾಲಿಗಾಗಿ ಅವರ ಎರಡನೇ ಪತ್ನಿ ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಅವರ ಇಬ್ಬರ ಮಕ್ಕಳು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ತಮ್ಮ ಮಲತಾಯಿ, ಸಂಜಯ್ ಕಪೂರ್ ಅವರ ಮೂರನೇ ಪತ್ನಿ ಪ್ರಿಯಾ ಕಪೂರ್ ಇಡೀ ಆಸ್ತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ತಂದೆಯ ವಿಲ್ ನ್ನು ನಕಲು ಮಾಡಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿ ಸಿವಿಲ್ ಮೊಕದ್ದಮೆ ದಾಖಲಿಸಿದ್ದಾರೆ. ಕಾನೂನು ತಮ್ಮ ತಾಯಿಯ ಮೂಲಕ ಪ್ರತಿನಿಧಿಸಿರುವ ಮಕ್ಕಳು, ಎಸ್ಟೇಟ್ ಪಾಲು, ಖಾತೆಗಳ ವಿವರಣೆ ಮತ್ತು ಪ್ರತಿವಾದಿಗಳ ವಿರುದ್ಧ ಶಾಶ್ವತ ತಡೆಯಾಜ್ಞೆಯನ್ನು ಕೋರಿದ್ದಾರೆ.
ತಮ್ಮ ತಂದೆಯ ಮರಣದ ಸಮಯದಲ್ಲಿ ಅವರ ಆಸ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದಿರಲಿಲ್ಲ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ. ಗೊತ್ತಿರುವ ಆಸ್ತಿಗಳ ಪಟ್ಟಿಯನ್ನು ದೂರಿನಲ್ಲಿ ಲಗತ್ತಿಸಿದ್ದಾರೆ. ಆದರೆ ಆರೋಪಿ ನಂ. 1 ಆಗಿರುವ ಪ್ರಿಯಾ ಕಪೂರ್ ವಿವರಗಳನ್ನು ಮರೆಮಾಚಿದ್ದಾರೆ ಮತ್ತು ಇಡೀ ಆಸ್ತಿಯ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.