ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಕೆಟರ್ ಯಜುವೇಂದ್ರ ಚಹಲ್, ನಟಿ ಧನಶ್ರೀ ವರ್ಮ ದಾಂಪತ್ಯ ಜೇವನಕ್ಕೆ ವಿಚ್ಛೇದನ ಪಡೆದಿದ್ದು, ಇದಾದ ಬಳಿಕ ಚಹಲ್ ಅವರು ಧನಶ್ರೀ ಅವರನ್ನು ಪರೋಕ್ಷವಾಗಿ ಸಾಕಷ್ಟು ಟೀಕೆ ಮಾಡಿದ್ದರು.
ಅಮೇಜಾನ್ ಎಂಎಕ್ಸ್ ಪ್ಲೇಯರ್ನ ‘ರೈಸ್ ಆ್ಯಂಡ್ ಫಾಲ್’ ಶೋನಲ್ಲಿ ಧನಶ್ರೀ ವರ್ಮಾ ಈ ಬಗ್ಗೆ ಮಾತನಾಡಿದ್ದಾರೆ. ‘ಧನಶ್ರೀ ಹಣಕ್ಕಾಗಿ ಎಲ್ಲವನ್ನೂ ಮಾಡುತ್ತಿದ್ದಾರೆ’ ಎಂದು ಚಹಲ್ ಅವರು ಪರೋಕ್ಷವಾಗಿ ಹೇಳಿದ್ದರು. ಟ್ರೋಲ್ ಪೇಜ್ಗಳು ಇದೇ ಅರ್ಥ ಬರುವ ರೀತಿಯಲ್ಲಿ ಧನಶ್ರೀ ಅವರನ್ನು ಬಿಂಬಿಸಿದ್ದಾರೆ.ಇದೀಗ ಈ ಬಗ್ಗೆ ಧನಶ್ರೀ ಶೋನಲ್ಲಿ ಮೌನ ಮುರಿದಿದ್ದಾರೆ.
ನಮ್ಮ ಮಧ್ಯೆ ಏನೋ ಜಗಳ ಆಯಿತು, ಒಬ್ಬರು ಸಂಬಂಧ ಕೊನೆ ಮಾಡಿಕೊಳ್ಳೋಣ ಎಂದು ಹೇಳಿದರು ಎಂದಿಟ್ಟುಕೊಳ್ಳಿ. ಆ ಮಾತಿಗೆ ಬದ್ಧವಾಗಿರಬೇಕು. ಪ್ರತಿಯೊಬ್ಬರ ಕೈಯಲ್ಲಿ ತಮ್ಮದೇ ಆದ ಗೌರವವಿರುತ್ತದೆ. ನೀವು ಮದುವೆ ಆದ ಬಳಿಕ ಇನ್ನೊಬ್ಬ ವ್ಯಕ್ತಿಯ ಗೌರವವೂ ನಿಮ್ಮ ಕೈಯಲ್ಲಿರುತ್ತದೆ ಎಂದಿದ್ದಾರೆ ಧನಶ್ರೀ.
ನನಗೂ ಅಗೌರವ ಸೂಚಿಸಲು, ಅವಮಾನ ಮಾಡಲು ಬರುತ್ತಿತ್ತು. ಆದರೆ, ಅವರು ನನ್ನ ಪತಿ ಆಗಿದ್ದರು. ನಾನು ಮದುವೆ ಆದ ಬಳಿಕ ಅವರಿಗೆ ಗೌರವ ನೀಡಿದ್ದೆ. ಈಗಲೂ ನಾನು ಮದುವೆಯಾದ ವ್ಯಕ್ತಿಯನ್ನು ಗೌರವಿಸಬೇಕು ಎಂದು ಧನಶ್ರೀ ವರ್ಮಾ ಹೇಳಿದರು.
ಧನಶ್ರೀ ವರ್ಮ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಾ ಇದ್ದಾರೆ.