Wednesday, September 10, 2025

ಆನ್‌ಲೈನ್‌ನಲ್ಲಿ ಫುಡ್‌ ಆರ್ಡರ್‌ ಮಾಡೋರಿಗೆ ಸಂಕಟ! ದರ ಮತ್ತಷ್ಟು ಹೆಚ್ಚಳ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅನಿವಾರ್ಯ ಸಂದರ್ಭಗಳಲ್ಲಿ ಆನ್‌ಲೈನ್‌ ಡೆಲಿವರಿ ಆಪ್‌ಗಳನ್ನು ಬಳಸಿ ಫುಡ್‌ ಆರ್ಡರ್‌ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಕೆಲವೊಮ್ಮೆ ಅದರ ದರ, ಡೆಲಿವರಿ ಚಾರ್ಜ್‌, ಜಿಎಸ್‌ಟಿ ಎಲ್ಲವನ್ನೂ ಕೂಡಿಸಿ ಕಡೆಯ ಮೊತ್ತ ನೋಡಿ ಜನ ಭಯಬೀಳುತ್ತಾರೆ.

ಇದಕ್ಕಿಂತ ಕಷ್ಟಬಿದ್ದಾದರೂ ಮನೆಯಲ್ಲಿಯೇ ಅಡುಗೆ ಮಾಡಿಕೊಳ್ಳಬೇಕು ಎಂದುಕೊಳ್ತಾರೆ. ಆದರೆ ಕೆಲವೊಂದು ಪರಿಸ್ಥಿತಿಯಲ್ಲಿ ಆರ್ಡರ್‌ ಅನಿವಾರ್ಯ! ಇಂಥವರಿಗೆ ಶಾಕ್‌ ನೀಡೋಕೆ ಕಂಪನಿಗಳು ಮುಂದಾಗಿವೆ.

 ಸ್ವಿಗ್ಗಿ, ಜೊಮೊಟೊ ಸೇರಿದಂತೆ ಫುಡ್ ಡೆಲಿವರಿ ಆಪ್‌ಗಳು ಫ್ಲಾಟ್‌ಫಾರಂ ಚಾರ್ಜ್ ಹೆಚ್ಚು ಮಾಡಲು ಮುಂದಾಗಿದೆ. ಈಗಾಗಲೇ ಆನ್‌ಲೈನ್ ಡೆಲಿವರಿ ಆಪ್‌ಗಳು ಡೆಲಿವರಿ ಚಾರ್ಜ್ ಎಂದು ಹಣವನ್ನು ತೆಗೆದುಕೊಳ್ಳುತ್ತಿದ್ದು, ಕಳೆದ ವರ್ಷದಿಂದ ಫ್ಲಾಟ್ ಫಾರಂ ಚಾರ್ಜ್ ತೆಗೆದುಕೊಳ್ಳಲು ಮುಂದಾಗಿದ್ದರು. 2 ರಿಂದ 3 ರೂ. ಇದ್ದ ದರ ಇದೀಗ 12 ರಿಂದ 15 ರೂ.ವರೆಗೆ ಏರಿಕೆ ಮಾಡಲು ನಿರ್ಧರಿಸಿದ್ದಾರೆ. ಸ್ವಿಗ್ಗಿ ಫ್ಲಾಟ್‌ಫಾರಂ ಚಾರ್ಜ್ 12 ರೂ., ಜೊಮಾಟೊ 15 ರು.ಗೆ ಏರಿಕೆ ಆಗಲಿದೆ.

ಇನ್ನೂ ಹಬ್ಬಗಳು ಆರಂಭವಾಗಿರುವ ಈ ಹೊತ್ತಿನಲ್ಲಿ ಕಂಪನಿಗಳು ದರ ಹೆಚ್ಚಳ ಮಾಡಿವೆ. ಅಲ್ಲದೆ ಈ ಕಂಪನಿಗಳು ಊಟ, ತಿಂಡಿಯನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆಗೆ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ, ಶೇಕಡ 18ರಷ್ಟು ತೆರಿಗೆಯನ್ನು ಸೆಪ್ಟೆಂಬರ್ 22ರಿಂದ ಜಾರಿ ಬರಲಿರುವ ಕಾರಣಕ್ಕೆ ಅದರ ಹೊರೆಯೂ ಗ್ರಾಹಕರ ಮೇಲೆ ಬೀಳಲಿದೆ.

ಜೊತೆಗೆ ಸಂಸ್ಥೆಗಳ ಪ್ಲಾಟ್‌ಫಾರಂ ಚಾರ್ಜ್ ಕೂಡ ಹೆಚ್ಚು ಮಾಡ್ತಿದೆ. ಇದಕ್ಕೆ ಹೋಟೆಲ್ ಮಾಲೀಕರು ನಾವು ಆನ್‌ಲೈನ್ ಸಂಸ್ಥೆಗೆ ಮನವಿ ಮಾಡಿದರೂ ಉಪಯೋಗ ಆಗ್ತಿಲ್ಲ, ಕೋವಿಡ್ ಸಮಯದಲ್ಲಿ ಅನಿವಾರ್ಯವಾಗಿ ಹೋಂ ಡೆಲಿವರಿ ತೆಗೆದುಕೊಳ್ಳಬೇಕಾಗಿತ್ತು. ಈಗ ಅಂತಹ ಸ್ಥಿತಿ ಕೂಡ ಇಲ್ಲ, ಹೋಮ್ ಡೆಲಿವರಿ ಮಾಡಿಸಿಕೊಳ್ಳೊದ್ರಿಂದ ಊಟದ ತಾಜಾತನ, ಬಿಸಿ ಕೂಡ ಇರೋಲ್ಲ, ಹೋಟೆಲ್‌ಗೆ ಬನ್ನಿ, ಅಲ್ಲೇ ಊಟ ಮಾಡಿ, ಹಣ ಕೂಡ ಉಳಿಸಿಕೊಳ್ಳಿ ಎಂದು ಹೋಟೆಲ್ ಮಾಲೀಕರು ತಿಳಿಸಿದ್ದಾರೆ.

ಇದನ್ನೂ ಓದಿ