Wednesday, September 10, 2025

ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌: ಇಂದಿನಿಂದ ಮತ್ತೊಂದು ಯೆಲ್ಲೋ ಟ್ರೈನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹಳದಿ ಮಾರ್ಗ ಮೆಟ್ರೋ ಪ್ರಯಾಣಿಕರಿಗೆ ಸಂತಸದ ಸುದ್ದಿಯನ್ನು ಬಿಎಂಆರ್‌ಸಿಎಲ್ ನೀಡಿದೆ. ಇವತ್ತಿನಿಂದ ಮತ್ತೊಂದು ರೈಲು ಹಳದಿ ಮಾರ್ಗದಲ್ಲಿ ಸೇರ್ಪಡೆಯಾಗಿದೆ. 

ಉದ್ಘಾಟನೆಯಾದ ದಿನ ಅಂದರೆ ಆಗಸ್ಟ್ 10 ರಿಂದ ಮೂರು ರೈಲುಗಳು ಮಾತ್ರ ಹಳದಿ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದವು. ಇವತ್ತಿನಿಂದ ಮತ್ತೊಂದು ರೈಲು ಹಳದಿ ಮಾರ್ಗದಲ್ಲಿ ಸೇರ್ಪಡೆಯಾಗಿದೆ.  ಬೆಳಗ್ಗೆಯಿಂದ 19 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚಾರ ಮಾಡಲಿವೆ. ಈ ಮೊದಲು 25 ನಿಮಿಷಕ್ಕೊಂದು ಮೆಟ್ರೋ ರೈಲು ಹಳದಿ ಮಾರ್ಗದಲ್ಲಿ ಓಡಾಡುತ್ತಿದ್ದವು.

ಸೋಮವಾರದಿಂದ ಶನಿವಾರದವರೆಗೆ ಇನ್ಮೇಲೆ 6 ಗಂಟೆಗೆ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಈ ಮೊದಲು ಬೆಳಗ್ಗೆ 6.30ಕ್ಕೆ ಹಳದಿ ಮಾರ್ಗದಲ್ಲಿ ರೈಲು ಆರಂಭವಾಗುತ್ತಿತ್ತು. ಭಾನುವಾರ ಎಂದಿನಂತೆ ಬೆಳಗ್ಗೆ 7 ಗಂಟೆಗೆ ಮೆಟ್ರೋ ವಾಣಿಜ್ಯ ಸಂಚಾರ ಶುರುವಾಗಲಿದೆ. ಆರ್.ವಿ ರಸ್ತೆ ಯಿಂದ ರಾತ್ರಿ 11-55ಕ್ಕೆ ಕೊನೆಯ ರೈಲು ಸಂಚರಿಸಲಿದೆ. ಬೊಮ್ಮಸಂದ್ರದಿಂದ ರಾತ್ರಿ 10-42 ಕ್ಕೆ ಕೊನೆಯ ರೈಲು ಎಂದಿನಂತೆ ಸಂಚರಿಸಲಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಅಧಿಕೃತವಾಗಿ ಈ ಮಾಹಿತಿ ನೀಡಿದೆ. ಮುಖ್ಯವಾಗಿ ಆರ್‌.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ಐ.ಟಿ. ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ಮಾಡುತ್ತಾರೆ. ಬೊಮ್ಮಸಂದ್ರ ಮಾರ್ಗದಲ್ಲಿ ಸಾಕಷ್ಟು ಐ.ಟಿ.ಕಂಪನಿಗಳಿವೆ. ಹೀಗಾಗಿ ನಾಲ್ಕನೇ ರೈಲು ಹಳದಿ ಮಾರ್ಗಕ್ಕೆ ಸೇರ್ಪಡೆಯಾಗಿರುವುದು ಐ.ಟಿ. ಉದ್ಯೋಗಿಗಳು ಸೇರಿದಂತೆ ಬೊಮ್ಮಸಂದ್ರ, ಅನೇಕಲ್ ಮಾರ್ಗದಲ್ಲಿ ಸಂಚಾರ ಮಾಡುವವರಿಗೆ ಅನುಕೂಲ ಆಗಲಿದೆ. 

ಇದನ್ನೂ ಓದಿ