ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಹಿನ್ನಲೆ ಮದ್ದೂರಿನ ಬಿಜೆಪಿ ಕಚೇರಿ ಬಳಿಗೆ ಗಣೇಶ ಮೂರ್ತಿಗಳು ಆಗಮಿಸುತ್ತಿವೆ. ತಾಲೂಕಿನ ವಿವಿಧೆಡೆ ಪ್ರತಿಷ್ಠಾಪನೆಗೊಂಡಿರುವ ಗಣಪತಿ ಮೂರ್ತಿಗಳು ತಮಟೆ ವಾದ್ಯಗಳೊಂದಿಗೆ ಭರ್ಜರಿಯಾಗಿ ಎಂಟ್ರಿ ಕೊಡ್ತಿವೆ. ಗಣೇಶ ಮೂರ್ತಿಗಳು ಬರುತ್ತಿದ್ದಂತೆ ಡಿಜೆ ಹಾಕಿ ಸಂಭ್ರಮಿಸಿದ ಹಿಂದೂ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಜೈ ಶ್ರೀರಾಮ್ ಹಾಡಿಗೆ ಕುಣಿದು ಕುಪ್ಪಳಿಸುತ್ತಿದ್ದಾರೆ. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಸಾಮೂಹಿಕ ಗಣೇಶ ವಿಸರ್ಜನೆ ಹಿನ್ನಲೆ ಮದ್ದೂರಿಗೆ ಬಿಜೆಪಿ ಸತ್ಯಶೋಧನ ಸಮಿತಿ ಆಗಮಿಸಿದೆ. ಬಿಜೆಪಿ ವಕ್ತಾರ ನಾರಾಯಣಗೌಡ ನೇತೃತ್ವದ ಬಿಜೆಪಿ ಸತ್ಯಶೋಧನ ಸಮಿತಿ ಮದ್ದೂರಿಗೆ ಆಗಮಿಸಿದೆ. ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ವಕ್ತಾರ ವೆಂಕಟೇಶ್ ದೊಡ್ಡೇರಿ, ಸ್ಥಳೀಯ ಮುಖಂಡ ಸ್ವಾಮಿಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್ ನೇತೃತ್ವದಲ್ಲಿ ತಂಡ ಮದ್ದೂರಿಗೆ ಆಗಮಿಸಿದ್ದು, ಕಲ್ಲು ತೂರಾಟದಿಂದ ಗಾಯಗೊಂಡರ ಮನೆ ಹಾಗೂ ಲಾಠಿಚಾರ್ಜ್ ನಿಂದ ಗಾಯಗೊಂಡವರ ಮನೆಗೆ ಭೇಟಿ ನೀಡಲಿದೆ.
ಮಂಡ್ಯದಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ : ಪೊಲೀಸರಿಂದ ಭದ್ರತೆ
