ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೊಸೆ ಕೊಟ್ಟ ದೂರಿನಿಂದ ಯಾವುದೇ ಆಶ್ಚರ್ಯ ಆಗಿಲ್ಲ. ಅವಳು ಮನೆ ಬಿಟ್ಟು ಹೋಗಿ ವರ್ಷವೇ ಕಳೆದಿದೆ. ಈಗ ಯಾಕೆ ಕಂಪ್ಲೆಂಟ್ ಕೊಟ್ಟಿದ್ದು? ಒಂದು ವರ್ಷದ ಹಿಂದೆಯೇ ಕೊಡಬಹುದಿತ್ತಲ್ಲ ಎಂದು ಎಸ್. ನಾರಾಯಣ್ ಹೇಳಿದ್ದಾರೆ.
ಈಗಿನ ಯುವ ಪೀಳಿಗೆಗೆ ಬುದ್ಧಿ ಹೇಳೋಕೆ ಆಗೋದಿಲ್ಲ. ನಾನು ಆಗಿನಿಂದಲೂ ವರದಕ್ಷಿಣೆ ವಿರುದ್ಧ ನಿಂತವನು, ಸಿನಿಮಾ ಮಾಡಿದವನು, ನಾನ್ಯಾಕೆ ವರದಕ್ಷಿಣೆ ಕೇಳಲಿ? ಇನ್ನೊಬ್ಬರಿಗೆ ಕೆಲಸ ಕೊಡುವಷ್ಟು ಶಕ್ತಿ ಇರುವ ನಾನು ಸೊಸೆ ಹಣದಲ್ಲಿ ಜೀವನ ಮಾಡ್ತಿದ್ದೇನಾ? ಇದಕ್ಕೆಲ್ಲ ಅವರೇ ಉತ್ತರಿಸಬೇಕು. ಕೆಲವರು ವರದಕ್ಷಿಣೆ ಕೇಸ್ ಹಾಕೋದನ್ನು ಅಸ್ತ್ರ ಮಾಡಿಕೊಂಡಿದ್ದಾರೆ ಎಂದರು.
ಮಗ ಮತ್ತು ಸೊಸೆ ಪ್ರೀತಿಸಿ ಮದುವೆಯಾದವರು. ನಾವ್ಯಾರೂ ಅಡ್ಡಿ ಮಾಡಿಲ್ಲ. ನಮ್ಮ ಕುಟುಂಬಕ್ಕೆ ಅವರು ಬಂದಾಗ ನಮ್ಮ ಕುಟುಂಬದ ಘನತೆ ಗೌರವ ಕಾಪಾಡಬೇಕು, ಹೀಗೆ ಕಳೆಯಬಾರದು ಎಂದಿದ್ದಾರೆ.
ದೂರಿನಿಂದ ಆಶ್ಚರ್ಯ ಆಗಿಲ್ಲ: ಡೌರಿ ಕೇಸ್ ಬಗ್ಗೆ ಎಸ್. ನಾರಾಯಣ್ ರಿಯಾಕ್ಷನ್
