Friday, September 12, 2025

ರಾಧಾಕೃಷ್ಣನ್‌ ಎಂದು ಹೆಸರಿಟ್ಟಿದ್ಯಾಕೆ? ಉಪರಾಷ್ಟ್ರಪತಿಗಳ ತಾಯಿ ಹೇಳಿದ್ದೇನು?

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಿ.ಪಿ. ರಾಧಾಕೃಷ್ಣನ್ ಅವರಿಗೆ ಇಂದು ಪ್ರಮಾಣವಚನ ಬೋಧಿಸುವ ಮೂಲಕ ದೇಶದ 15ನೇ ಉಪ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದರು.

ಸಿ.ಪಿ. ರಾಧಾಕೃಷ್ಣನ್ ಅವರ ಗೆಲುವಿನ ಬಗ್ಗೆ ಅವರ ತಾಯಿ ಜಾನಕಿ ಅಮ್ಮಾಳ್ ಸಂತೋಷ ವ್ಯಕ್ತಪಡಿಸಿದರು. ತಮ್ಮ ಮಗ ಉನ್ನತ ಸ್ಥಾನಕ್ಕೆ ಏರಿರುವುದು ತುಂಬಾ ಸಂತೋಷದ ವಿಷಯ ಎಂದು ಹೇಳಿದರು.


ಸಿ ಪಿ ರಾಧಾಕೃಷ್ಣನ್ ಅವರ ಹೆಸರಿನ ಹಿಂದಿನ ಕಥೆಯನ್ನು ಅವರ ತಾಯಿ ಪ್ರೀತಿಯಿಂದ ನೆನಪಿಸಿಕೊಂಡರು. ತಮ್ಮ ಮಗನಿಗೆ ಭಾರತದ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹೆಸರನ್ನು ಇಟ್ಟಿದ್ದಾಗಿ ಹೇಳಿದರು.

ತಮ್ಮ ಮಗ ಜನಿಸಿದಾಗ, ಅಂದಿನ ದೇಶದ ರಾಷ್ಟ್ರಪತಿ ರಾಧಾಕೃಷ್ಣನ್ ಅವರು ಅಧಿಕಾರದಲ್ಲಿದ್ದರು. ನಾನು ಆ ಸಮಯದಲ್ಲಿ ಶಿಕ್ಷಕಿಯಾಗಿದ್ದೆ. ಮಾಜಿ ರಾಷ್ಟ್ರಪತಿಗಳ ನೆನಪಿಗಾಗಿ ಮಗನಿಗೆ ಆ ಹೆಸರನ್ನಿಟ್ಟೆ ಎಂದರು.

ನನ್ನ ಮಗ ಜನಿಸಿದಾಗ, ಅಂದಿನ ರಾಷ್ಟ್ರಪತಿ ರಾಧಾಕೃಷ್ಣನ್ ಅವರು ಅಧಿಕಾರದಲ್ಲಿದ್ದರು. ಅವರು ಶಿಕ್ಷಕರಾಗಿದ್ದರು, ಮತ್ತು ನಾನು ಕೂಡ ಶಿಕ್ಷರಿಯಾಗಿದ್ದೆ. ಅವರ ನೆನಪಿಗಾಗಿ, ನಾನು ನನ್ನ ಮಗನಿಗೆ ಅವರ ಹೆಸರಿಟ್ಟಿದ್ದೇನೆ ಎಂದು ಎಂದರು.

ಆ ಸಮಯದಲ್ಲಿ, ನನ್ನ ಪತಿ ನನ್ನನ್ನು ನೋಡಿ, ನಿನ್ನ ಮಗ ಒಂದು ದಿನ ರಾಷ್ಟ್ರಪತಿಯಾಗಬೇಕೆಂದು ಬಯಸಿ ಈ ಹೆಸರು ಇಡುತ್ತಿದ್ದೀಯಾ ಎಂದು ಕೇಳಿದ್ದರು. 62 ವರ್ಷಗಳ ನಂತರ, ನನ್ನ ಪತಿ ಹೇಳಿದಂತೆ, ಅದು ನಿಜವಾಗಿದೆ. ನನಗೆ ಅದರ ಬಗ್ಗೆ ತುಂಬಾ ಸಂತೋಷವಾಗಿದೆ ಎಂದರು.

ಇದನ್ನೂ ಓದಿ