Friday, September 12, 2025

ಎಸ್‌ಐಟಿ ಅಂಗಳಕ್ಕೆ ಆನೆ ಮಾವುತ ನಾರಾಯಾಣ, ಯುಮುನಾ ಜೋಡಿ ಕೊಲೆ ಕೇಸ್!?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಧರ್ಮಸ್ಥಳ ಗ್ರಾಮದಲ್ಲಿ 2012ರಲ್ಲಿ ನಡೆದ ಆನೆ ಮಾವುತ ನಾರಾಯಾಣ ಹಾಗೂ ಆತನ ಸಹೋದರಿ ಯುಮುನಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮರು ತನಿಖೆ ನಡೆಸುವಂತೆ ಅವರ ಮಕ್ಕಳಾದ ಗಣೇಶ ಹಾಗೂ ಭಾರತಿ ಎಂಬವರು ಎಸ್‌ಐಟಿಗೆ ದೂರು ನೀಡಿದ್ದಾರೆ.

ದೂರು ಸಲ್ಲಿಕೆ ಸಂದರ್ಭ ಅವರ ಜತೆಗಿದ್ದ ದಿನೇಶ್ ಗಾಣಿಗ ಎಂಬುವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಈ ಪ್ರಕರಣದ ಮರು ತನಿಖೆಗಾಗಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ತನಿಖೆ ಮಾಡಲಾಗದು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದರು. ಇದೀಗ ಮೇಲ್ಮನವಿಯನ್ನು ಹಿಂಪಡೆಯಲಾಗಿದ್ದು, ಎಸ್‌ಐಟಿಗೆ ದಾಖಲೆಯನ್ನು ಸಲ್ಲಿಸಿದ್ದೇವೆ ಎಂದರು.

ಈ ಜೋಡಿ ಕೊಲೆ ಪ್ರಕರಣದಲ್ಲಿ ಅಪರಾಧಿ ಸಿಗದೇ ಇರುವುದರಿಂದ ಸಿ ರಿಪೋರ್ಟ್ ಹಾಕಲಾಗಿತ್ತು. ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. ಅಲ್ಲದೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೃತರ ಮಕ್ಕಳು ದ.ಕ. ಜಿಲ್ಲಾ ಎಸ್‌ಪಿ ಸಹಿತ ಹಲವು ಅಧಿಕಾರಿಗಳಿಗೆ ಹಲವಾರು ಮನವಿ ಸಲ್ಲಿಸಿದ್ದರು. ಇದೀಗ ಮೇಲ್ಮನವಿ ಹಿಂಪಡೆದು ಎಸ್‌ಐಟಿಗೆ ಪ್ರಕರಣದ ಎಲ್ಲಾ ದಾಖಲೆಗಳನ್ನು ನೀಡಿದ್ದೇವೆ. ಅವರು ಸೂಕ್ತ ತನಿಖೆ ಮಾಡುವ ಭರವಸೆ ನೀಡಿದ್ದಾರೆ. ಅವರ ತನಿಖೆ ಮೇಲೆ ನನಗೆ ಪೂರ್ಣ ಭರವಸೆ ಇದೆ ಎಂದು ಗಾಣಿಗ ಹೇಳಿದರು.

ಇದನ್ನೂ ಓದಿ