Thursday, September 11, 2025

ನಟ ದಿ. ವಿಷ್ಣುವರ್ಧನ್ ಗೆ ಮರಣೋತ್ತರ ‘ಕರ್ನಾಟಕ ರತ್ನ’ ಘೋಷಣೆ: ಭಾರತಿ ವಿಷ್ಣುವರ್ಧನ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪುರಸ್ಕಾರ ಘೋಷಣೆಯಾಗಿದೆ .

ಇತ್ತೀಚೆಗೆ ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಅವರು ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡಿದ್ದರು. ಈ ಮನವಿಗೆ ಈಗ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದ್ದಕ್ಕೆ ಭಾರತಿ ವಿಷ್ಣುವರ್ಧನ್ ಸಂತಸ ವ್ಯಕ್ತಪಡಿಸಿದ್ದಾರೆ.

75ನೇ ವಸಂತದಲ್ಲಿ ಅವರಿಗೆ ಸಿಗಬೇಕು ಅಂತ ಪ್ರೇರಣೆ ಇತ್ತು. ವಿಷ್ಣು ಅಭಿಮಾನಿಗಳ ಸಂತಸ ನೋಡುತ್ತಿದ್ದರೇ, ಮನಸ್ಸು ತುಂಬಿ ಬರುತ್ತೆ. ಅಭಿಮಾನಿಗಳ ಸಂತೋಷವೇ ನಮ್ಮ ಸಂತೋಷ ಎಂದರು.

ಈ ಕರ್ನಾಟಕ ರತ್ನ ಪ್ರಶಸ್ತಿ ಅಭಿಮಾನಿಗಳಿಗೆ ಅರ್ಪಣೆಯಾಗುತ್ತೆ. ಅಭಿಮಾನಿಗಳ ಕೋರಿಕೆ , ಆಸೆ ಮೇರೆಗೆ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯ & ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುವೆ ಎಂದರು.

ಇದನ್ನೂ ಓದಿ