Friday, September 12, 2025

ಸಿಲಿಕಾನ್ ಸಿಟಿ ಜನತೆ ಗಮನಿಸಿ: ಈ ಮೂರು ದಿನಗಳ ಕಾಲ ಕಾವೇರಿ ನೀರು ಪೂರೈಕೆ ಸ್ಥಗಿತ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸೆಪ್ಟೆಂಬ್ 15 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಕಾವೇರಿ 5ನೇ ಹಂತದ ಪಂಪಿಂಗ್ ಸ್ಟೇಷನ್ ನಿಂದ ನೀರು ಪೂರೈಕೆ ಬಂದ್ ಆಗಲಿದೆ.

ಸೆಪ್ಟೆಂಬರ್ 15 ರಂದು ರಾತ್ರಿ 1 ಗಂಟೆಯಿಂದ ಸೆಪ್ಟೆಂಬರ್ 17 ಮಧ್ಯಾಹ್ನ 1 ಗಂಟೆಯವರೆಗೆ ಕಾವೇರಿ ನೀರು ಪೂರೈಕೆ ಬಂದ್ ಆಗಲಿದೆ ಕಾವೇರಿ 5ನೇ ಹಂತದಲ್ಲಿ 60 ಗಂಟೆಗಳ ಕಾಲ ಕಾವೇರಿ ನೀರು ಪೂರೈಕೆ ಸ್ಥಗಿತಗೊಳ್ಳಲಿದೆ. ಕಾವೇರಿ 1,2,3 ಹಾಗು 4ನೇ ಹಂತದಲ್ಲಿ 24 ಗಂಟೆ ನೀರು ಪೂರೈಕೆ ಸ್ಥಗಿತಗೋಳ್ಳಲಿದೆ ಇನ್ನು ಸೆಪ್ಟೆಂಬರ್ 16 ಬೆಳಿಗ್ಗೆ 6 ರಿಂದ 17 ರಂದು ಬೆಳಿಗ್ಗೆ ನೀರು ಪೂರೈಕೆ ಬಂದ್ ಆಗಲಿದೆ ಅಗತ್ಯ ನೀರನ್ನು ಸಂಗ್ರಹಿಸಿಕೊಳ್ಳುವಂತೆ ಜಲಮಂಡಳಿ ಮನವಿ ಮಾಡಿಕೊಂಡಿದೆ.

ಇದನ್ನೂ ಓದಿ