ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ವಿಚಾರಣೆಗೆ ಒಳಗಾದ ಬಳಿಕ ಯೂಟ್ಯೂಬರ್ ಸಮೀರ್‌ನ ಹೊಸ ವಿಡಿಯೋ ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
ಈ ವಿಡಿಯೋದಲ್ಲಿ ಸಮೀರ್ ವಿವಿಧ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದು, ನನಗೆ ವಿದೇಶದಿಂದ ಫಂಡ್ ಬಂದಿದೆ ಎಂಬ ಆರೋಪ ಸುಳ್ಳು, ನನ್ನ ಎರಡು ಬ್ಯಾಂಕ್ ಅಔಂಟ್‌ಗಳ ಸಹಿತ ಎಲ್ಲಾ ಮಾಹಿತಿ ಅಧಿಕಾರಿಗಳಿಗೆ ನೀಡಿದ್ದೇನೆ. ಒಂದು ವೇಳೆ ಹಣ ಪಡೆದಿದ್ದರೆ ಅದು ತನಿಖೆಯಿಂದ ಬಹಿರಂಗವಾಗುತ್ತಿತ್ತು. ಇಂತಹಾ ಆರೋಪಗಳು ನನ್ನ ಮೊದಲ ವಿಡಿಯೋದಿಂದಲೇ ಕೇಳಿಬಂದಿದ್ದವು ಎಂದು ಆತ ಹೇಳಿದ್ದಾರೆ. ಸುಜಾತ ಭಟ್ ಬಗ್ಗೆ ಮಾಡಿದ ವಿಡಿಯೋ ಸಂಬಂಧ ಮಾತನಾಡಿದ ಆತ, ಆ ತಾಯಿಯ ಕಣ್ಣೀರನ್ನು ನೋಡಿ ವಿಡಿಯೋ ಮಾಡಿದ್ದೆ. ಈಗ ಆ ಕಣ್ಣೀರೇ ಸುಳ್ಳು ಅಂದ್ರೆ ನಾನು ಏನು ಮಾಡಲಿ? ಎಂದು ಪ್ರಶ್ನಿಸಿದ್ದಾರೆ.
ಸ್ಟುಡಿಯೋದಲ್ಲಿ ಕ್ಯಾಮರಾ ಮುಂದೆ ಕುಳಿತು ಮಾತನಾಡುತ್ತಿದ್ದ ನಾನು ಇಂದು ಕಾರಲ್ಲಿ ಕೂತು ವಿಡಿಯೋ ಮಾಡ್ತಿದ್ದೇನೆ. ಪೊಲೀಸ್ ತನಿಖೆಗೆ ಬಂದ ಬಳಿಕ ಇಂದು ನನಗೆ ಮನೆ ಇಲ್ಲ ಅನ್ನುವ ಸ್ಥಿತಿ ಬಂದಿದೆ. ಬಾಡಿಗೆ ಮನೆಯಲ್ಲಿ ಇದ್ದೆವು. ಪೊಲೀಸರು ತನಿಖೆಗೆ ಬಂದ ಬಳಿಕ ಮನೆ ಮಾಲಿಕರು ಮನೆ ಖಾಲಿ ಮಾಡಿಸಿದ್ದಾರೆ. ಇವತ್ತು ಸಮೀರ್ ಎಂಡಿ ಅಂದರೆ ಯಾರೂ ಮನೆ ಕೊಡ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.