Sunday, September 14, 2025

ಪಾಕ್ ಎದುರಿನ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟಿ-20 ಏಷ್ಯಾ ಕಪ್‌ 2025 ಪಂದ್ಯಾವಳಿಯಲ್ಲಿ ಭಾರತ-ಪಾಕಿಸ್ತಾನ ಪಂದ್ಯಕ್ಕೆ, ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನ ಸಜ್ಜಾಗಿದೆ. ಆದ್ರೆ ಪಂದ್ಯ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ಆಘಾತವಾಗಿದೆ.

ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಶುಭಮನ್‌ ಗಿಲ್‌ ಗಾಯಗೊಂಡಿದ್ದಾರೆ.

ಭಾರತ – ಪಾಕ್‌ ಪಂದ್ಯಕ್ಕಾಗಿ ಕಠಿಣ ಅಭ್ಯಾಸ ನಡೆಸುತ್ತಿದ್ದ ವೇಳೆ ಕೈಗೆ ಬಾಲ್‌ ಬಡಿದು, ಇದರಿಂದ ವಿಪರೀತ ನೋವು ಕಾಣಿಸಿಕೊಂಡಿದೆ. ಬಳಿಕ ಅಭ್ಯಾಸ ಸ್ಥಗಿತಗೊಳಿಸಿದ್ದು, ಫಿಸಿಯೋಥೆರಪಿಸ್ಟ್‌ ತಪಾಸಣೆ ನಡೆಸಿದ್ದಾರೆ. ಇದಾದ ಬಳಿಕ ಮತ್ತೆ ನೆಟ್ಸ್‌ನಲ್ಲಿ ಗಿಲ್‌ ಬೆವರಿಳಿಸಿದ್ದಾರೆ.

ಗಿಲ್‌ ಇಂಜುರಿಗೊಂಡ ಬಳಿಕ ನಾಯಕ ಸೂರ್ಯಕುಮಾರ್‌ ಯಾದವ್‌ , ಮುಖ್ಯಕೋಚ್‌ ಗಂಭೀರ್‌ ಅವರೊಂದಿಗೆ ಮಾತನಾಡಿದ್ದಾರೆ. ಒಂದು ವೇಳೆ ಇಂದಿನ ಪಂದ್ಯದಲ್ಲಿ ಗಿಲ್‌ ಔಟಾದ್ರೆ, ಸಂಜು ಸ್ಯಾಮ್ಸನ್‌ ಆರಂಭಿಕನಾಗಿ ಕಣಕ್ಕಿಳಿಯಲಿದ್ದು, ಗಿಲ್‌ ಬದಲಿಗೆ ಜಿತೇಶ್‌ ಶರ್ಮಾ ಕಣಕ್ಕಿಳಿಯಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ