Monday, September 15, 2025

ಹಾಂಗ್ ಕಾಂಗ್ ಓಪನ್‌: ಚೀನಾ ವಿರುದ್ಧ ಭಾರತದ ಸಾತ್ವಿಕ್‌-ಚಿರಾಗ್ ಜೋಡಿಗೆ ಸೋಲು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಡಬ್ಲ್ಯೂಎಫ್ ವರ್ಲ್ಡ್ ಟೂರ್ ಸೂಪರ್ 500 ಟೂರ್ನಿಯಾದ ಹಾಂಗ್ ಕಾಂಗ್ ಓಪನ್‌ನಲ್ಲಿ ಭಾರತದ ಸಾತ್ವಿಕ್‌ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಭಾನುವಾರ ನಡೆದ ಫೈನಲ್‌ನಲ್ಲಿ ಚೀನಾದ ಲಿಯಾಂಗ್ ವೀ ಕೆಂಗ್ ಮತ್ತು ವಾಂಗ್ ಚಾಂಗ್ ವಿರುದ್ಧ ಸೋಲು ಅನುಭವಿಸಿದ್ದು, ರನ್ನರ್ ಅಪ್ ಸ್ಥಾನ ಪಡೆದರು.

ಭಾನುವಾರ ನಡೆದ ಫೈನಲ್‌ನಲ್ಲಿ ಮೂರು ಗೇಮ್‌ಗಳ ತೀವ್ರ ಹೋರಟ ನಡೆಸಿದರೂ 19-21, 21-14, 21-17 ಅಂತರದಿಂದ ಪರಾಭವಗೊಂಡರು.

ಎಂಟನೇ ಶ್ರೇಯಾಂಕದ ಭಾರತೀಯ ಜೋಡಿ ಮೊದಲ ಗೇಮ್ ಅನ್ನು ತಮ್ಮದಾಗಿಸಿಕೊಂಡಿತು ಆದರೆ ಲಿಯಾಂಗ್ ಮತ್ತು ವಾಂಗ್ ಎರಡನೇ ಹಾಗೂ ಅಂತಿಮ ಗೇಮ್ ಗೇಮ್ ಅನ್ನು ಗೆದ್ದುಕೊಂಡರು. ಪಂದ್ಯ 61 ನಿಮಿಷಗಳಲ್ಲಿ ಮುಕ್ತಾಯಕಂಡಿತು.

ಸೆಮಿಫೈನಲ್‌ನಲ್ಲಿ ಸಾತ್ವಿಕ್‌–ಚಿರಾಗ್‌ ಜೋಡಿಯು ಚೀನಾ ತೈಪೆಯ ಶೆನ್‌ ಶೆಂಗ್‌ ಕುವಾನ್‌– ಲಿನ್‌ ಬಿಂಗ್‌ ವೈ ಅವರ ವಿರುದ್ಧ 21-17, 21-15ರ ನೇರ ಗೇಮ್‌ಗಳಿಂದ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದ್ದರು.

ಇದನ್ನೂ ಓದಿ