Sunday, October 12, 2025

CINE | ಫ್ಯಾನ್ಸ್‌ಗೆ ಹಬ್ಬದೂಟ ಬಡಿಸಲು ಸಜ್ಜಾದ ಕಿಚ್ಚ ಸುದೀಪ್! ಏನಿರಬಹುದು ಆ ಗುಡ್ ನ್ಯೂಸ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫ್ಯಾನ್ಸ್‌ಗೆ ಹಬ್ಬದೂಟ ಬಡಿಸಲು ಕಿಚ್ಚ ಸುದೀಪ್ ಸಜ್ಜಾಗಿದ್ದಾರೆ. ಮಾರ್ಕ್ ಚಿತ್ರದ ಫಸ್ಟ್ ಲಿರಿಕಲ್ ಸಾಂಗ್ ಶೀಘ್ರದಲ್ಲೇ ರಿಲೀಸ್ ಆಗಲಿದೆ ಎಂಬ ಸುದ್ದಿಯನ್ನ ಎಕ್ಸ್ ಖಾತೆಯಲ್ಲಿ ಸುದೀಪ್ ಹಂಚಿಕೊಂಡಿದ್ದಾರೆ.

ಕಳೆದ ಸೆ.2ರಂದು ಕಿಚ್ಚನ ಮುಂದಿನ ಚಿತ್ರದ ಟೈಟಲ್ ರಿವೀಲ್ ಆಗಿತ್ತು. ಇದರ ಬೆನ್ನಲ್ಲೇ ಸುದೀಪ್ ಫಸ್ಟ್ ಸಾಂಗ್ ಎಂಟ್ರಿಯ ಸುದ್ದಿ ಘೋಷಿಸಿರುವುದು ಫ್ಯಾನ್ಸ್ ಖುಷಿಯನ್ನ ಹೆಚ್ಚಿಸಿದೆ. ಡಿಸೆಂಬರ್ 25ಕ್ಕೆ ಮಾರ್ಕ್ ಸಿನಿಮಾ ರಿಲೀಸ್ ಆಗಲಿದ್ದು, ಸೆಟ್ಟೇರಿದ ದಿನವೇ ಸಿನಿಮಾ ಬಿಡುಗಡೆ ದಿನಾಂಕವೂ ಘೋಷಣೆಯಾಗಿತ್ತು. ಇದೀಗ ಮೊದಲ ಹಾಡನ್ನ ರಿಲೀಸ್ ಮಾಡುವ ಮೂಲಕ ಮಗದೊಮ್ಮೆ ಸಿನಿಮಾ ರೆಡಿ ಇದೆ ಎಂಬ ಸಿಗ್ನಲ್ ಕೊಡಲು ಹೊರಟಿದ್ದಾರೆ.

error: Content is protected !!