Wednesday, September 17, 2025

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌: ಮೊದಲ ಥ್ರೋನಲ್ಲಿ ಫೈನಲ್‌ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಜಾವೆಲಿನ್ ಚಾಂಪಿಯನ್ ನೀರಜ್ ಚೋಪ್ರಾ ಬುಧವಾರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌’ನ ಪುರುಷರ ಜಾವೆಲಿನ್ ಫೈನಲ್‌’ಗೆ ಅರ್ಹತೆ ಪಡೆದಿದ್ದಾರೆ.

ಅರ್ಹತಾ ಸುತ್ತಿನ ಮೊದಲ ಪ್ರಯತ್ನದಲ್ಲೇ 84.85 ಮೀ. ಎಸೆತದೊಂದಿಗೆ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಫೈನಲ್‌ ಪಂದ್ಯ ಗುರುವಾರ ನಡೆಯಲಿದೆ.

ಜೂಲಿಯನ್ ವೆಬರ್ ತಮ್ಮ ಎರಡನೇ ಪ್ರಯತ್ನದಲ್ಲಿ 87.21 ಮೀ ಎಸೆತವನ್ನು ದಾಖಲಿಸಿ ನೀರಜ್ ನಂತರ ಫೈನಲ್‌ಗೆ ಅರ್ಹತೆ ಪಡೆದ ಎರಡನೇ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಗ್ರೂಪ್‌ ಎ ವಿಭಾಗದಲ್ಲಿ ಕಣಕ್ಕಿಳಿದ್ದ ನೀರಜ್‌ ಉತ್ತಮ ಪ್ರದರ್ಶನ ತೋರುವ ಮೂಲಕ ಫೈನಲ್‌ ಟಿಕೆಟ್‌ ಪಡೆದರು. 2023ರ ಬುಡಾಪೆಸ್ಟ್‌ನಲ್ಲಿ ನಡೆದಿದ್ದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೀರಜ್‌ 88.17ಮೂ. ಎಸೆತದೊಂದಿಗೆ ಚಿನ್ನದ ಪದಕ ಜಯಿಸಿದ್ದರು.

ಇದನ್ನೂ ಓದಿ