ಹೊಸದಿಗಂತ ವರದಿ ಶಿವಮೊಗ್ಗ:
ಬೆಂಗಳೂರಿನಿಂದ ಶಿವಮೊಗ್ಗ ಹಾಗೂ ಶಿವಮೊಗ್ಗದಿಂದ ಬೆಂಗಳೂರಿಗೆ ಇಂಡಿಗೋ ಏರ್ ಲೈನ್ಸ್ ವಿಮಾನವು 6E 7731 (BLR-RQY) ಮತ್ತು 6E 7732 (RQY-BLR) ದಿನಬಿಟ್ಟು ದಿನ ಹಾರಾಟ ಮಾಡುತ್ತಿತ್ತು. ಈಗ ಸೆಪ್ಟೆಂಬರ್ 21 ರಿಂದ ಪ್ರತಿನಿತ್ಯ ಹಾರಾಟ ಮಾಡಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಪ್ರತಿ ದಿನ ಬೆಳಿಗ್ಗೆ 9.35 ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನವು ಶಿವಮೊಗ್ಗವನ್ನು ಬೆಳಿಗ್ಗೆ 10.45 ಕ್ಕೆ ತಲುಪಲಿದೆ. ಅದೇ ರೀತಿ ಶಿವಮೊಗ್ಗದಿಂದ ಬೆಳಿಗ್ಗೆ 11.05 ಕ್ಕೆ ಹೊರಡುವ ವಿಮಾನವು ಮಧ್ಯಾಹ್ನ 12.05 ಕ್ಕೆ ಬೆಂಗಳೂರನ್ನು ತಲುಪಲಿದೆ.
ಈ ಸೌಲಭ್ಯವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಸಂಸದ ಬಿ.ವೈ. ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ಮುಂದೆ ಶಿವಮೊಗ್ಗೆಯಿಂದ ಬೆಂಗಳೂರಿಗೆ ನಿತ್ಯವೂ ಹಾರಲಿದೆ ಇಂಡಿಗೋ ವಿಮಾನ
