Wednesday, September 24, 2025

‘X’ಗೆ ಮುಖಭಂಗ: ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಅಗತ್ಯ ಎಂದ ಹೈಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರದ ಐಟಿ ಕಾಯ್ದೆಯಡಿ ವಿಷಯ ನಿರ್ಬಂಧಿಸುವ ಮಾರ್ಗಸೂಚಿಗಳನ್ನ ಪ್ರಶ್ನಿಸಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ.

ಎಕ್ಸ್ ನ ಟ್ವೀಟ್ ಗಳನ್ನು ಬ್ಲಾಕ್ ಮಾಡುವ ಆದೇಶ ನೀಡುವ ಕೇಂದ್ರ ಸರ್ಕಾರದ ಸಹಯೋಗ್ ಪೋರ್ಟಲ್ ಅಧಿಕಾರಗಳನ್ನು ಪ್ರಶ್ನಿಸಿ ಎಕ್ಸ್ ಕರ್ನಾಟಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.

ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಎಕ್ಸ್ ನ ಅರ್ಜಿಯಲ್ಲಿ ಯಾವುದೇ ಮೆರಿಟ್ ಇಲ್ಲ ಎಂದು ತೀರ್ಪು ನೀಡಿದ್ದು, ಅರ್ಜಿಯನ್ನು ವಜಾಗೊಳಿಸಿದೆ.

ಸಾಮಾಜಿಕ ಮಾಧ್ಯಮಗಳ ನಿಯಂತ್ರಣ ಇಂದಿನ ಅಗತ್ಯವಾಗಿದೆ ಮತ್ತು ಕಂಪನಿಗಳು ನಿಯಂತ್ರಣವಿಲ್ಲದೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಭಾರತೀಯ ಸಂವಿಧಾನದ 19ನೇ ವಿಧಿಯು ನಾಗರಿಕರಿಗೆ ಮಾತ್ರ ಮುಕ್ತ ಅಭಿವ್ಯಕ್ತಿಯನ್ನು ರಕ್ಷಿಸುತ್ತದೆ, ಅಂದರೆ ಅದನ್ನು ವಿದೇಶಿ ಕಂಪನಿಗಳು ಅಥವಾ ನಾಗರಿಕರಲ್ಲದವರಿಗೆ ಅನ್ವಯಿಸಲಾಗುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಭಾರತದಲ್ಲಿ ಭಾರತೀಯನಲ್ಲದೆ ಮತ್ಯಾರಿಗೂ ವಾಕ್ ಸ್ವಾತಂತ್ರ್ಯದ ಹಕ್ಕು ಅನ್ನು ನೀಡಲಾಗದು. ಕೇಂದ್ರ ಸರ್ಕಾರ ಸಹಯೋಗ್ ಪೋರ್ಟಲ್ ಬಳಸುವುದರ ವಿರುದ್ಧ ನಿಯಂತ್ರಣ ಸಾಧ್ಯವಿಲ್ಲ. ನಾಗರೀಕ ಸಮಾಜದ ಅರೋಗ್ಯ ಕಾಪಾಡಲು, ಮಹಿಳೆ ಮತ್ತು ಮಕ್ಕಳ ಗೌರವ ಕಾಪಾಡಲು ಸಾಮಾಜಿಕ ಮಾಧ್ಯಮಗಳ ಮೇಲೆ ನಿಯಂತ್ರಣ ಅಗತ್ಯ. ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಫ್ , ಸ್ನಾಪ್ ಚಾಟ್, ಇನ್ಸ್ಟಾ ಗ್ರಾಮ್ ಮುಂತಾದ ಸಾಮಾಜಿಕ ತಾಣಗಳ ಮೇಲೆ ನಿಯಂತ್ರಣ ಹೇರುವುದು ಈ ಕಾಲದ ಅತ್ಯಂತ ಅವಶ್ಯವಾಗಿದೆ ಎಂದ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ನ್ಯಾಯಾಂಗದ ಅಲೋಚನೆಗಳನ್ನು ಭಾರತದ ಸಂವಿಧಾನಿಕ ಅಲೋಚನೆಯಲ್ಲಿ ನೆಡಲು ಸಾಧ್ಯವಿಲ್ಲ. ಯಾವುದೇ ಪ್ಲಾಟ್ ಫಾರಂ ಭಾರತದ ಮಾರುಕಟ್ಟೆ ಸ್ಥಳವನ್ನು ತನ್ನ ಪ್ಲೇ ಗ್ರೌಂಡ್ ಆಗಿ ಟ್ರೀಟ್ ಮಾಡಬಾರದು. ಇನ್ನೂ ಎಕ್ಸ್ ಕಂಪನಿ ಅಥವಾ ಸಂಸ್ಥೆಯು ಭಾರತದ ನಾಗರಿಕನೇ ಅಲ್ಲ.ಸಾಮಾಜಿಕ ಮಾಧ್ಯಮಗಳ ಮೇಲ ಸರ್ಕಾರದ ನಿಯಂತ್ರಣ ಈ ಕಾಲದ ಅಗತ್ಯ ಎಂದು ಹೈಕೋರ್ಟ್ ತೀರ್ಪು ನೀಡಿದೆ.

ಇದನ್ನೂ ಓದಿ