ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವಾರ OTT ಪ್ರೇಕ್ಷಕರಿಗೆ ಫುಲ್ ಎಂಟರ್‌ಟೈನ್‌ಮೆಂಟ್ ಪ್ಯಾಕೇಜ್ ಸಿದ್ಧವಾಗಿದೆ. ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದೇ ವೇಳೆ ಹಲವು ಹೊಸ ಸಿನಿಮಾಗಳು ಮತ್ತು ಬಹು ನಿರೀಕ್ಷಿತ ವೆಬ್ ಸರಣಿ ಬಿಡುಗಡೆಯಾಗುತ್ತಿದ್ದು, ಥ್ರಿಲ್ಲರ್, ಆಕ್ಷನ್, ಹಾಸ್ಯ ಮತ್ತು ಸಸ್ಪೆನ್ಸ್ ಪ್ರಿಯರಿಗೆ ಇದು ಹಬ್ಬದ ವಾರವೇ ಆಗಿದೆ. ನೆಟ್‌ಫ್ಲಿಕ್ಸ್‌ನಿಂದ ಆರಂಭಿಸಿ ಅಮೆಜಾನ್ ಪ್ರೈಮ್, ZEE5 ಮತ್ತು ಸೋನಿಲೈವ್ ವರೆಗೆ ವಿಭಿನ್ನ ಶೈಲಿಯ ಕಂಟೆಂಟ್ ಲಭ್ಯವಾಗಲಿದೆ.
ಈ ವಾರದ ಪ್ರಮುಖ ಆಕರ್ಷಣೆ ಎಂದರೆ ಇಮ್ರಾನ್ ಹಶ್ಮಿ ನಾಯಕತ್ವದ ಕ್ರೈಂ-ಥ್ರಿಲ್ಲರ್ ವೆಬ್ ಸರಣಿ ‘ತಸ್ಕರಿ – ದಿ ಸ್ಮಗ್ಲರ್ಸ್’. ಗಂಭೀರ ಕಥಾಹಂದರ ಮತ್ತು ಶಕ್ತಿಶಾಲಿ ತಾರಾಗಣ ಹೊಂದಿರುವ ಈ ಸರಣಿ ಜನವರಿ 14ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಸಸ್ಪೆನ್ಸ್ ಪ್ರಿಯರ ನಿರೀಕ್ಷೆ ಇದರಿಂದ ಹೆಚ್ಚಾಗಿದೆ.
ಇನ್ನೊಂದೆಡೆ, ರಿತೇಶ್ ದೇಶ್ಮುಖ್, ಅಫ್ತಾಬ್ ಶಿವದಾಸನಿ ಮತ್ತು ವಿವೇಕ್ ಒಬೆರಾಯ್ ಅಭಿನಯದ ಹಾಸ್ಯ ಚಿತ್ರ ‘ಮಸ್ತಿ 4’ ಜನವರಿ 16ರಂದು ZEE5ನಲ್ಲಿ ಡಿಜಿಟಲ್ ಪ್ರೀಮಿಯರ್ ತೆರೆ ಕಾಣಲಿದೆ. ಚಿತ್ರಮಂದಿರಗಳಲ್ಲಿ ಹೆಚ್ಚು ಸದ್ದು ಮಾಡದಿದ್ದರೂ OTTನಲ್ಲಿ ಹೊಸ ಪ್ರೇಕ್ಷಕರನ್ನು ಸೆಳೆಯುವ ನಿರೀಕ್ಷೆಯಿದೆ.
ಫರ್ಹಾನ್ ಅಖ್ತರ್ ಅಭಿನಯದ ದೇಶಭಕ್ತಿ ಸಿನಿಮಾ ‘120 ಬಹದ್ದೂರ್’ ಜನವರಿ 16ರಿಂದ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಾಗಲಿದೆ. ಮಲಯಾಳಂ ಆಕ್ಷನ್-ಹಾಸ್ಯ ‘ಭಾ ಭಾ ಬಾ’ ಕೂಡ ಇದೇ ದಿನ ZEE5ನಲ್ಲಿ ಬಿಡುಗಡೆಯಾಗುತ್ತಿದೆ. ಮಮ್ಮುಟ್ಟಿ ಅಭಿನಯದ ಆಕ್ಷನ್-ಥ್ರಿಲ್ಲರ್ ‘ಕಲಂಕವಲ್ – ದಿ ವೆನಮ್ ಬಿನೀತ್’ ಸೋನಿಲೈವ್‌ನಲ್ಲಿ ಸ್ಟ್ರೀಮಿಂಗ್ ಆಗಲಿದ್ದು, ಈ ವಾರ OTT ಪರದೆಗಳು ಸಂಪೂರ್ಣ ಮನರಂಜನೆಯಲ್ಲಿ ಮುಳುಗಲಿವೆ.


