ಬೇಲೂರು ತಾಲೂಕಿನ ಹೆಗ್ಗಡಿಹಳ್ಳಿ ಬಳಿ ಭೀಮ ಕಾಡಾನೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ

ಹೊಸದಿಗಂತ ವರದಿ ಹಾಸನ: ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಹೆಗ್ಗಡಿಹಳ್ಳಿ ಗ್ರಾಮದ ಸಮೀಪ ಭೀಮ ಹೆಸರಿನ ಕಾಡಾನೆ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಕಳೆದ ಹಲವು ದಿನಗಳಿಂದ ಸಕಲೇಶಪುರ ತಾಲೂಕಿನಲ್ಲಿ ಸಂಚರಿಸುತ್ತಿದ್ದ ಭೀಮ ಕಾಡಾನೆ ಮಂಗಳವಾರ ಸಂಜೆ ಲಿಂಗಾಪುರದ ಬಳಿ ಕಾಣಿಸಿಕೊಂಡಿತ್ತು. ಬಳಿಕ ರಾತ್ರಿ ಅರೇಹಳ್ಳಿ–ದೋಲನಮನೆ ರಸ್ತೆಯಲ್ಲಿ ಸಂಚರಿಸಿದ್ದು, ರಸ್ತೆಯಲ್ಲಿ ಕಾಡಾನೆ ಓಡಾಡುವುದನ್ನು ಕಂಡ ವಾಹನ ಸವಾರರು ಹಾಗೂ ಸ್ಥಳೀಯರು ಭಯಭೀತರಾಗಿದ್ದಾರೆ. ರಸ್ತೆ ದಾಟಿದ ಬಳಿಕ ವೀರಭದ್ರೇಶ್ವರ ಕಾಫಿ ಎಸ್ಟೇಟ್ ಪ್ರವೇಶಿಸಿದ ಕಾಡಾನೆ, ತೋಟದೊಳಗೆ … Continue reading ಬೇಲೂರು ತಾಲೂಕಿನ ಹೆಗ್ಗಡಿಹಳ್ಳಿ ಬಳಿ ಭೀಮ ಕಾಡಾನೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ