ಶ್ರೀಲಂಕಾದ ಬಾನಿನಲ್ಲಿ ಕುಡ್ಲದ ಗಾಳಿಪಟ: ‘ಟೀಮ್ ಮಂಗಳೂರು’ಗೆ ಅಂತಾರಾಷ್ಟ್ರೀಯ ವೇದಿಕೆ ಗೌರವ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಕಡಲತಡಿ ಮಂಗಳೂರಿನ ಹವ್ಯಾಸಿ ಗಾಳಿಪಟ ತಂಡ ‘ಟೀಮ್ ಮಂಗಳೂರು’ ಶ್ರೀಲಂಕಾದಲ್ಲಿ ನಡೆದ ಪ್ರತಿಷ್ಠಿತ ‘ಸಿರಾಸಾ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ 2026’ರಲ್ಲಿ ಭಾಗವಹಿಸಿ ಭಾರತದ ಪ್ರತಿನಿಧಿಯಾಗಿ ಗಮನ ಸೆಳೆದಿದೆ. ಶ್ರೀಲಂಕಾದ ಮಾತಾರಾ ಬೀಚ್‌ನಲ್ಲಿ ನಡೆದ ಈ ಉತ್ಸವದಲ್ಲಿ ಮಂಗಳೂರಿನ ತಂಡ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಶಿಷ್ಟ ಗಾಳಿಪಟಗಳನ್ನು ಹಾರಿಸಿ ಎಲ್ಲರ ಮೆಚ್ಚುಗೆ ಗಳಿಸಿದೆ. ಶ್ರೀಲಂಕಾದ ಹೆರಿಟೇಜ್ ಕೈಟ್ಸ್ ಸಂಸ್ಥೆಯು ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಇಲಾಖೆಗಳ ಸಹಯೋಗದಲ್ಲಿ ಈ ಉತ್ಸವವನ್ನು ಆಯೋಜಿಸಿತ್ತು. ವಿವಿಧ ದೇಶಗಳ … Continue reading ಶ್ರೀಲಂಕಾದ ಬಾನಿನಲ್ಲಿ ಕುಡ್ಲದ ಗಾಳಿಪಟ: ‘ಟೀಮ್ ಮಂಗಳೂರು’ಗೆ ಅಂತಾರಾಷ್ಟ್ರೀಯ ವೇದಿಕೆ ಗೌರವ!