Sunday, October 12, 2025

ಮಲೆನಾಡಿನ ಹಸಿರು ಭೂಮಿತಾಯಿಗೆ ಸೀಮಂತ ಸಂಭ್ರಮ, ಧರೆಗೆ ವಿಶಿಷ್ಟ ಭಕ್ಷ್ಯ ಅರ್ಪಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೊಲ ಉಳುಮೆ ಮಾಡಿ, ಬಿತ್ತಿ, ಬೆಳೆದು, ಕಟಾವು ಮಾಡಿ, ಎಷ್ಟೇ ನೋವನ್ನು ತಿಂದರೂ ಭೂಮಿ ತಾಯಿ ಅತ್ಯುತ್ತಮ ಬೆಳೆ ನೀಡುತ್ತಾಳೆ. ಈ ತಾಯಿಯ ಗುಣವುಳ್ಳ ಭೂಮಿಗೆ ಮಲೆನಾಡಿನಲ್ಲಿ ಸೀಮಂತ ಶಾಸ್ತ್ರ ನಡೆದಿದೆ. ಪ್ರತೀ ವರ್ಷವೂ ವಿಜಯದಶಮಿ ನಂತರ ಭೂಮಿ ತಾಯಿಗೆ ಸೀಮಂತ ಶಾಸ್ತ್ರ ಮಾಡಲಾಗುತ್ತದೆ.

ವರ್ಷವಿಡೀ ನಮ್ಮನ್ನು ಸಾಕಿ ಸಲಹಿದಂತೆ ಮುಂದೆಯೂ ನಮ್ಮನ್ನು ಮಕ್ಕಳಂತೆ ಕಾಪಾಡು ಎಂದು ರೈತರು ಭೂಮಿತಾಯಿಯನ್ನು ಕೈ ಮುಗಿದು ಬೇಡುತ್ತಾರೆ. ಹೆಣ್ಣಿನ ಸೀಮಂತ ಶಾಸ್ತ್ರದಂತೆಯೇ ಭೂಮಿಗೆ ಬಳೆ, ಹೂವು, ಅರಿಶಿಣ, ಕುಂಕುಮ, ತರತರದ ಹಣ್ಣು, ತಿಂಡಿ, ಊಟ ಅರ್ಪಣೆ ಮಾಡಲಾಗುತ್ತದೆ.

ಇನ್ನು ಮನೆಮಂದಿಯೆಲ್ಲಾ ಜಮೀನು, ತೋಟದಲ್ಲಿಯೇ ಕುಳಿತು ಒಟ್ಟಿಗೇ ಊಟ ಮಾಡುತ್ತಾರೆ. ಭೂಮಿತಾಯಿಯ ಸೀಮಂತವನ್ನು ಸಂಭ್ರಮಿಸುತ್ತಾರೆ.

error: Content is protected !!