Sunday, October 12, 2025

ಬಿಗಿ ಭದ್ರತೆ ನಡುವೆಯೂ ತಮಿಳು ನಟ ದಳಪತಿ ವಿಜಯ್ ಮನೆಗೆ ನುಗ್ಗಿದ ವ್ಯಕ್ತಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟ ಹಾಗೂ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ, ದಳಪತಿ ವಿಜಯ್ ಅವರ ನಿವಾಸಕ್ಕೆ ವ್ಯಕ್ತಿಯೊಬ್ಬ ನುಗ್ಗಿರುವ ಘಟನೆ ನಡೆದಿದೆ.

ಏಕಾಏಕಿ ವಿಜಯ್‌ ನಿವಾಸಕ್ಕೆ ಭದ್ರತೆಯ ನಡುವೆಯೂ ಅರುಣ್ ಎಂದು ಗುರುತಿಸಲಾದ 24 ವರ್ಷದ ಯುವಕ ನುಗ್ಗಿದ್ದಾನೆ. ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಆದರೆ ಆ ವ್ಯಕ್ತಿಯ ಮಾನಸಿ ಸ್ಥಿತಿ ಸರಿ ಇಲ್ಲ ಎಂಬುದು ತಿಳಿದುಬಂದಿದೆ. ಅರುಣ್‌ ಒಳ ನುಗ್ಗುವ ಮೊದಲು ವಿಜಯ್‌ ಅವರ ಮನೆಯ ಟೆರಸ್‌ನಲ್ಲಿ ಕುಳಿತಿದ್ದ. ಆತನನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತಕ್ಷಣವೇ ಬಂಧಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಆ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದೇವೆ. ಯುವಕ ಮಾನಸಿಕ ಅಸ್ವಸ್ಥ ಎಂದು ತಿಳಿದಿದ್ದು, ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದೇವೆ. ವಿಜಯ್‌ಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದರೂ ಆ ವ್ಯಕ್ತಿ ಮನೆಗೆ ಹೇಗೆ ಪ್ರವೇಶ ಪಡೆದನೆಂದು ತಿಳಿಯಲು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. ಘಟನೆಯ ನಂತರ, ಕಾಲಿವುಡ್ ನಟ ಈ ವಿಷಯವನ್ನು ತನಿಖೆ ಮಾಡುವಂತೆ ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದರು.

error: Content is protected !!