Thursday, October 16, 2025

ಜೀವನದ ಹೊಸ ಚಾಪ್ಟರ್, ಕಟ್ರೀನಾ-ವಿಕ್ಕಿ ಕಡೆಯಿಂದ ಅನೌನ್ಸ್‌ಮೆಂಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ವಿಕ್ಕಿ ಕೌಶಲ್‌ ಹಾಗೂ ಕಟ್ರೀನಾ ಕೈಫ್‌ ಪ್ರೆಗ್ನೆನ್ಸಿ ಅನೌನ್ಸ್‌ಮೆಂಟ್‌ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಟ್ರೀನಾ ಪ್ರೆಗ್ನೆಂಟ್‌ ಎನ್ನುವ ಸುದ್ದಿಗಳು ಹರಿದಾಡಿದ್ದರೂ ಕಪಲ್‌ ಯಾವುದೇ ಅಪ್‌ಡೇಟ್‌ ನೀಡಿರಲಿಲ್ಲ.

ಇದೀಗ ವಿಕ್ಕಿ ಹಾಗೂ ಕಟ್ರೀನಾ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಒಂದನ್ನು ಮಾಡಿದ್ದಾರೆ. ಪೋಲರೈಡ್‌ ಫೋಟೊ ಒಂದರಲ್ಲಿ ಕಟ್ರೀನಾ ಹಾಗೂ ವಿಕ್ಕಿಯ ಪೋಟೊ ಇದೆ. ಇದರಲ್ಲಿ ವಿಕ್ಕಿ ಕಟ್ರೀನಾ ಬೇಬಿಬಂಪ್‌ ಮೇಲೆ ಕೈ ಇಟ್ಟಿದ್ದಾರೆ.

ನಮ್ಮ ಜೀವನದ ಬೆಸ್ಟ್‌ ಚಾಪ್ಟರ್‌ನ ಹಾದಿಯಲ್ಲಿದ್ದೇವೆ. ಮನದಲ್ಲಿ ಸಂತೋಷ ತುಂಬಿದೆ ಎಂದು ಹೇಳಿದ್ದಾರೆ. ಬಾಲಿವುಡ್‌ ಮಂದಿ ಇವರಿಗೆ ಕಂಗ್ರಾಟ್ಸ್‌ ಹೇಳಿದ್ದಾರೆ.

error: Content is protected !!