ಸಾಮಾಗ್ರಿಗಳು
ಎಣ್ಣೆ – 2 ಟೀಸ್ಪೂನ್
ಕಡಲೆಕಾಯಿ ಅಥವಾ ಶೇಂಗಾ – 1 ಟೀಸ್ಪೂನ್
ಉದ್ದಿನಬೇಳೆ – 1 ಟೀಸ್ಪೂನ್
ಜೀರಿಗೆ – ಅರ್ಧ ಟೀಸ್ಪೂನ್
ಶುಂಠಿಯ ತುಂಡು – ಸ್ವಲ್ಪ
ಬೆಳ್ಳುಳ್ಳಿ ಎಸಳು – 5
ಹುಣಸೆ – ಸ್ವಲ್ಪ
ಪುದೀನಾ ಎಲೆಗಳು – ಸ್ವಲ್ಪ
ಹಸಿ ಮೆಣಸಿನಕಾಯಿ – 5
ಪುಟಾಣಿ ಅಥವಾ ಹುರಿಗಡಲೆ – ಕಾಲು ಕಪ್
ಕೊಬ್ಬರಿ ತುರಿ – 1 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ
ಕೊಬ್ಬರಿ ಪುದೀನಾ ಚಟ್ನಿಯನ್ನು ತಯಾರಿಸಲು ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿಮಾಡಿದ ನಂತರ ಕಡಲೆಕಾಯಿ, ಉದ್ದಿನಬೇಳೆ ಹಾಕಿ ಹುರಿಯಬೇಕು.
ಹುರಿದ ಬಳಿಕ ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಹುಣಸೆಹಣ್ಣು ಹಾಗೂ ಹಸಿಮೆಣಸಿನಕಾಯಿಗಳನ್ನು ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ಫ್ರೈ ಮಾಡಿ. ಬಳಿಕ ಪುದೀನಾ ಎಲೆಗಳನ್ನು ಸೇರಿಸಿ ಮತ್ತು ಅವುಗಳನ್ನು ಬೇಯಿಸಬೇಕು.
ನಂತರ ಕಾಯಿತುರಿ, ಕೊತ್ತಂಬರಿ ಹಾಗೂ ಉಪ್ಪು ಹಾಕಿ ರುಬ್ಬಿದ್ರೆ ಚಟ್ನಿ ರೆಡಿ