Sunday, August 31, 2025

ಅಪ್ಪು ಇಲ್ಲದೆ ಮದುವೆ ಇನ್‌ಕಂಪ್ಲೀಟ್‌! ಮದುವೆಯಲ್ಲಿ ಪುನೀತ್‌ ಫೋಟೊ ಇಟ್ಟುಕೊಂಡ ಅನುಶ್ರೀ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪುನೀತ್ ರಾಜಕುಮಾರ್ ಅಪ್ಪಟ ಅಭಿಮಾನಿಯಾಗಿರುವ ಅನುಶ್ರೀ ತಾವು ಮದುವೆಯಾಗುತ್ತಿರುವ ಮಂಟಪದಲ್ಲಿ ಅಪ್ಪು ಫೋಟೋವನ್ನು ರಾರಾಜಿಸುವಂತೆ ಮಾಡಿದ್ದಾರೆ.

ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಇಂದು (ಆ.28) ಕೊಡಗು ಮೂಲದ ರೋಷನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ನಿರೂಪಣೆಯಿಂದ ಹೆಚ್ಚು ಜನಪ್ರಿಯತೆ ಗಳಿಸಿದ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ಹಸೆಮಣೆ ಏರಿದ್ದು, 10:56ರ ಶುಭ ಮೂಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ವೇಳೆ ತಮ್ಮ ಮಂಟಪದ ಪಕ್ಕವೇ ಅನುಶ್ರೀ ಪುನೀತ್‌ ರಾಜ್‌ ಕುಮಾರ್‌ ಪೋಟೊ ಇಡಿಸಿಕೊಂಡಿದ್ದಾರೆ. ಪುನೀತ್‌ ಅವರ ಸಮ್ಮುಖದಲ್ಲಿಯೇ ಮದುವೆಯಾದಂತೆ ಅನಿಸುತ್ತಿದೆ ಎಂದು ಅನುಶ್ರೀ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ