Thursday, September 11, 2025

ನಟ ದರ್ಶನ್‌ಗೆ ಬಿಸಿಲ ʼದರುಶನʼ : ಬೆಳಗ್ಗೆ-ಸಂಜೆ ವಾಕ್‌ ಮಾಡೋಕೆ ಸಿಕ್ತು ಪರ್ಮಿಷನ್‌!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ನಟ ದರ್ಶನ್‌ಗೆ ಬೆಳಗ್ಗೆ ಮತ್ತು ಸಂಜೆ 40 ನಿಮಿಷ ವಾಕಿಂಗ್‌ ಮಾಡಲು ಅವಕಾಶ ನೀಡಲಾಗಿದೆ.

ಬ್ಯಾರಕ್‌ನ ಹೊರಭಾಗದ ಕಾರಿಡಾರ್‌ನಲ್ಲಿ ವಾಕ್ ಮಾಡಲು ಅನುಮತಿ ಸಿಕ್ಕಿದೆ. ಈ ಸಮಯದಲ್ಲಿ ಬೇರೆ ವಿಚಾರಣಾಧೀನಾ ಕೈದಿಗಳು ವಾಕ್ ಮಾಡುವಂತಿಲ್ಲ. ದರ್ಶನ್ ವಾಕ್ ಮುಗಿದ ನಂತರವಷ್ಟೇ ಇತರರು ವಾಕ್ ಮಾಡಬಹುದಾಗಿದೆ. 

ವಾಕಿಂಗ್ ಸೇರಿದಂತೆ ಸೆಲ್‌ನಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳು ಸಿಸಿಟಿವಿಯಲ್ಲಿ ದಾಖಲಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಅದರ ಜೊತೆಗೆ ದರ್ಶನ್ ಸೆಲ್ ಬಳಿ ಕೆಲಸ ಮಾಡುವ ಎಲ್ಲಾ15 ಸಿಬ್ಬಂದಿ  ಕಡ್ಡಾಯವಾಗಿ ಬಾಡಿ ವಾರ್ನ್ ಕ್ಯಾಮರಾ ಹಾಕಿಕೊಂಡು ಕೆಲಸ ಮಾಡಲು ಮೇಲಾಧಿಕಾರಿಗಳು ಸೂಚಿಸಿದ್ದಾರೆ.

ಜೈಲಿನಲ್ಲಿರುವ ನಟ ದರ್ಶನ್‌ಗೆ ಕನಿಷ್ಠ ಸವಲತ್ತುಗಳನ್ನು ನೀಡುವಂತೆ ಕೋರ್ಟ್ ಸೂಚಿಸಿತ್ತು. ವಿಚಾರಣೆ ವೇಳೆ ನ್ಯಾಯಾಧೀಶರ ಎದುರು ನನಗೆ ವಿಷ ಕೊಟ್ಟು ಬಿಡಿ. ನನಗೆ ಜೈಲು ಜೀವನ ಸಾಕಾಗಿದೆ. ಬಿಸಿಲು ನೋಡಿ ತಿಂಗಳಾಗಿದೆ. ಫಂಗಸ್ ಸಮಸ್ಯೆ ಆಗುತ್ತಿದೆ ಎಂದು ದರ್ಶನ್ ಗೋಗರೆದಿದ್ದರು.

ಇದನ್ನೂ ಓದಿ