ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಇಂದು ಸಂಜೆ ದಿಢೀರ್ ಮೈಸೂರಿಗೆ ಆಗಮಿಸಿ ಚಾಮುಂಡಿ ದೇವಿ ದರುಶನ ಪಡೆದಿದ್ದಾರೆ.
ವಾರದ ಹಿಂದೆ ದರ್ಶನ್ ಅಸ್ಸಾಂನ ಗುವಾಹಟಿಯ ಕಾಮಾಕ್ಯದೇವಿ ದರ್ಶನ ಮಾಡಿ ಬಂದಿದ್ದರು. ಇದೀಗ ಚಾಮುಂಡಿ ತಾಯಿ ದರುಶನ ಪಡೆದಿದ್ದಾರೆ.
ದ್ಯದಲ್ಲೇ ದರ್ಶನ್‌ಗೆ ನೀಡಿರುವ ಜಾಮೀನಿನ ರದ್ದು ಕೋರಿ ಸಲ್ಲಿಸಲಾದ ಅರ್ಜಿಯ ಆದೇಶ ಹೊರಬೀಳುತ್ತೆ. ಇದೇ ಆತಂಕದಲ್ಲೇ ಇರುವ ದರ್ಶನ್ ನೆಮ್ಮದಿಗಾಗಿ ದೇವತೆಗಳ ಮೊರೆ ಹೋಗುತ್ತಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.