ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ನಟ, ನಿರ್ದೇಶಕ ರಿಷಭ್ ಶೆಟ್ಟಿ ದಂಪತಿ ಸಹಿತ ಮಂಗಳವಾರ ಭೇಟಿ ನೀಡಿ ದೇವರ ದರುಶನ ಪಡೆದರು.
ಬಹುನಿರೀಕ್ಷಿತ ಕಾಂತಾರ ಚಾಪ್ಟರ್ 1 ಸಿನಿಮಾದ ಟ್ರೈಲರ್ ಅನ್ನು ನವರಾತ್ರಿ ದಿನ ಬಿಡುಗಡೆ ಮಾಡಲಾಯಿತು. ಟ್ರೈಲರ್‌ಗೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.
ಇದರ ಬೆನ್ನಲ್ಲೇ ದೇಗುಲಕ್ಕೆ ಭೇಟಿ ಸಿನಿಮಾ ಯಶಸ್ಸಿಗಾಗಿ ನಟ ಪ್ರಾರ್ಥಿಸಿದ್ದಾರೆ.