Tuesday, November 4, 2025

ಹುಟ್ಟುಹಬ್ಬಕ್ಕೆ ನಟ ಶಾರುಖ್ ಖಾನ್ ಹೊಸ ಮೂವಿ ಟೈಟಲ್ ಟೀಸರ್ ರಿಲೀಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಇಂದು ಹುಟ್ಟುಹಬ್ಬ ಸಂಭ್ರಮ. ‘ಈ ಕ್ಷಣ ‘ಕಿಂಗ್’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅಧಿಕೃತವಾಗಿ ಈ ಸಿನಿಮಾದ ಟೈಟಲ್ ಅನೌನ್ಸ್ ಆಗಿದೆ.

ಇಂದು (ನವೆಂಬರ್ 2) ಶಾರುಖ್ ಖಾನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಟೈಟಲ್ ಟೀಸರ್ ಬಿಡುಗಡೆ ಮಾಡಲಾಗಿದೆ. ಅದನ್ನು ಕಂಡು ಅಭಿಮಾನಿಗಳಿಗೆ ತುಂಬ ಖುಷಿ ಆಗಿದೆ. ಶಾರುಖ್ ಖಾನ್ ಅವರು ಈ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಮಾಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕೆ ಟೀಸರ್​​ನಲ್ಲೇ ಸುಳಿವು ಸಿಕ್ಕಿದೆ. ಕಿಂಗ್ ಸಿನಿಮಾದ ಟೀಸರ್ ಈಗ ಎಲ್ಲ ಕಡೆಗಳಲ್ಲಿ ವೈರಲ್ ಆಗುತ್ತಿದೆ.

ಶಾರುಖ್ ಖಾನ್ ಜೊತೆ ‘ಪಠಾಣ್’ ಸಿನಿಮಾ ಮಾಡಿ ಬಹುದೊಡ್ಡ ಹಿಟ್ ನೀಡಿದ್ದ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ಈಗ ‘ಕಿಂಗ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಅಭಿಮಾನಿಗಳಿಂದ ಕಿಂಗ್ ಸಿನಿಮಾದ ಟೀಸರ್​​ಗೆ ಮೆಚ್ಚುಗೆ ಸಿಕ್ಕಿದೆ.

‘ಕಿಂಗ್’ ಚಿತ್ರದ ಟೀಸರ್​ನಲ್ಲಿ ಶಾರುಖ್ ಖಾನ್ ಅವರ ಫಸ್ಟ್ ಲುಕ್ ಬಹಿರಂಗ ಆಗಿದೆ. ಸ್ವತಃ ಶಾರುಖ್ ಖಾನ್ ಅವರೇ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬಹಳ ಎಚ್ಚರಿಕೆ ವಹಿಸಿ ಅವರು ಈ ಸ್ಕ್ರಿಪ್ಟ್ ಆಯ್ಕೆ ಮಾಡಿದ್ದಾರೆ. ಯಾವುದೇ ಅವಸರ ಇಲ್ಲದೇ ಸಾಕಷ್ಟು ಸಮಯ ನೀಡಿ ಸಿನಿಮಾ ಮಾಡಲಾಗುತ್ತಿದೆ. ಈ ಎಲ್ಲ ಕಾರಣಗಳಿಂದಾಗಿ ‘ಕಿಂಗ್’ ಸಿನಿಮಾದ ಮೇಲಿನ ನಿರೀಕ್ಷೆ ಡಬಲ್ ಆಗಿದೆ.

ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಕೂಡ ‘ಕಿಂಗ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದೊಡ್ಡ ಪರದೆಯಲ್ಲಿ ತೆರೆಕಾಣಲಿರುವ ಸುಹಾನಾ ಖಾನ್ ಅವರ ಮೊದಲ ಸಿನಿಮಾ ಇದಾಗಲಿದೆ.

error: Content is protected !!