Saturday, August 30, 2025

ನಟ ವಿಷ್ಣುವರ್ಧನ್ ಸಮಾಧಿ ವಿಚಾರ: ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ಹಿರಿಯ ನಟ ವಿಷ್ಣುವರ್ಧನ್ ಸಮಾಧಿ ಎಲ್ಲಿ ಮಾಡಬೇಕು ಎಂದು ಸರ್ಕಾರ ತೀರ್ಮಾನ ಮಾಡುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.

ನಾವು ನಿಯಮ, ಕಾಯ್ದೆ, ಕಾನೂನುಗಳ ಪ್ರಕಾರ ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ತೆಗೆದುಕೊಳ್ಳುತ್ತೇವೆ. ನಟ ವಿಷ್ಣುವರ್ಧನ್ ಸಮಾಧಿ ಎಲ್ಲಿ, ಯಾವ ರೀತಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ತೀರ್ಮಾನ ಮಾಡುತ್ತಾರೆ ಎಂದರು.

ನಮ್ಮ ಅಧಿಕಾರಿಗಳು ಡಿಸಿಗೆ ಪತ್ರ ಬರೆದಿದ್ದಾರೆ, ಇದು ರೋಟಿನ್ ಕೆಲಸವಾಗಿದ್ದು, ಪ್ರಗತಿ ಪರಿಶೀಲನೆ ಮಾಡುವಾಗ ಎಲ್ಲಾ ವಿಷಯಗಳು ಚರ್ಚೆಗೆ ಬರುತ್ತವೆ. ಸಮಯ ತಕ್ಕಂತೆ ನಾನು ಸೂಚನೆ ಹಾಗೂ ಆದೇಶಗಳನ್ನು ಕೊಡುತ್ತಿದ್ದು, ಬೆಂಗಳೂರಿಗೆ ಹೋಗಿ ವಿಷ್ಣು ಸಮಾಧಿ ಜಾಗದ ವಿವಾದದ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ