ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಮೌನಿ ರಾಯ್ ಫ್ಯಾನ್ಸಿ ರೆಸ್ಟೋರೆಂಟ್ ಒಂದನ್ನು ಹೊಂದಿದ್ದಾರೆ. ಇಲ್ಲಿ ಊಟ ಸಿಕ್ಕಾಪಟ್ಟೆ ಕಾಸ್ಟ್ಲಿ ಎಂದು ನೆಟ್ಟಿಗರು ಹೇಳ್ತಿದ್ದಾರೆ.
‘ಬದ್ಮಾಶ್’ ಅನ್ನೋದು ಮೌನಿ ರಾಯ್ ರೆಸ್ಟೋರೆಂಟ್ ಹೆಸರು. ಬೆಂಗಳೂರಿನ ಸರ್ಜಾಪುರದಲ್ಲಿ ಅವರು 2023ರಲ್ಲಿ ಮೊದಲ ಔಟ್ಲೆಟ್ ಆರಂಭಿಸಿದರು. ಈಗ ಮುಂಬೈ, ಕೋಲ್ಕತ್ತ ಸೇರಿದಂತೆ ಆರು ಕಡೆಗಳಲ್ಲಿ ಅವರ ಹೋಟೆಲ್ ಇದೆ. ಈ ರೆಸ್ಟೋರೆಂಟ್ಗೆ ಭೇಟಿ ನೀಡಬೇಕು ಎಂದರೆ ನೀವು ದೊಡ್ಡ ಮೊತ್ತ ತೆತ್ತಲು ರೆಡಿ ಇರಬೇಕು. ಇಲ್ಲಿನ ತಿಂಡಿಗಳ ಬೆಲೆ 300 ರೂಪಾಯಿಯಿಂದ ಆರಂಭ ಆಗಿ 800 ರೂಪಾಯಿವರೆಗೆ ಇದೆ.
ಜಾಮೂನಿನ ಬೆಲೆ 410 ರೂಪಾಯಿ. ಅವಕಾಡೋ ಭೇಲ್ ಬೆಲೆ 395 ರೂಪಾಯಿ. ಮಸಾಲಾ ಪೀನಟ್, ಮಸಾಲಾ ಪಾಪಡ್, ಕ್ರಿಸ್ಪಿ ಕಾರ್ನ್ ಹಾಗು ಶೇವ್ ಪುರಿ ಬೆಲೆ 295 ರೂಪಾಯಿ. ಸಿಗಡಿಯಿಂದ ಮಾಡಿದ ತಿಂಡಿಗಳ ಬೆಲೆ 795 ರೂಪಾಯಿ. ತಂದೂರಿ ರೋಟಿ ಒಂದಕ್ಕೆ 105 ರೂಪಾಯಿ. ನಾನ್ ಬೆಲೆ 115 ರೂಪಾಯಿಯಂತೆ! ಹೋಗೋದು ಬಿಡೋದು ಜನರಿಚ್ಛೆ!
ನಟಿ ಮೌನಿ ರಾಯ್ ರೆಸ್ಟೋರೆಂಟ್ ಸಿಕ್ಕಾಪಟ್ಟೆ ಕಾಸ್ಟ್ಲಿ: ಭೇಲ್ ಪುರಿಗೆ 400 ರೂಪಾಯಿ!

