Sunday, September 7, 2025

ಮಂಗಳೂರು – ತಿರುವನಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಇನ್ಮುಂದೆ ಹೆಚ್ಚುವರಿ ಬೋಗಿಗಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಂಗಳೂರು – ತಿರುವನಂತಪುರ ವಂದೇ ಭಾರತ್ (20631/20632) ಎಕ್ಸ್‌ಪ್ರೆಸ್ ರೈಲುಗಾಡಿಯಲ್ಲಿ ಇನ್ಮುಂದೆ ಒಟ್ಟು20 ಬೋಗಿಗಳು ಇರಲಿವೆ. ಇದುವರೆಗೆ ಈ ರೈಲುಗಾಡಿಯು 16 ಬೋಗಿಗಳನ್ನು ಹೊಂದಿತ್ತು.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಸಮಗ್ರ ತಪಾಸಣೆ ನಡೆಸಿದ ಬಳಿಕ 20 ಬೋಗಿಗಳುಳ್ಳ ರೈಲುಗಾಡಿ ಸಂಚಾರ ಆರಂಭಿಸಲಿದೆ. ಚೆನ್ನೈ ಇಂಟಗ್ರಲ್ ಕೋಚ್ ಫ್ಯಾಕ್ಟರಿಯಿಂದ ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಾಣಗೊಂಡು ಹೊರಬಂದು ತಿರುವನಂತಪುರಕ್ಕೆ ಆಗಮಿಸಿದ್ದ ಈ ರೈಲನ್ನು ದಕ್ಷಿಣ ರೈಲ್ವೆಗೆ ಹಸ್ತಾಂತರಿಸಲಾಗಿದೆ.

ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಇದುವರೆಗೆ 1016 ಸೀಟುಗಳಿದ್ದವು. ಹೊಸದಾಗಿ 320 ಸೀಟುಗಳನ್ನು ಅಳವಡಿಸಲಾಗಿದೆ. ಈ ಮೂಲಕ ಒಟ್ಟು ಸೀಟುಗಳ ಸಂಖ್ಯೆ 1336 ಆಗಲಿದೆ. ಈ ರೈಲುಗಾಡಿಯು ಮಂಗಳೂರಿನಿಂದ ಕಾಸರಗೋಡು ಮೂಲಕ ಪಾಲಕ್ಕಾಡು ದಾರಿಯಾಗಿ ತಿರುವನಂತಪುರಕ್ಕೆ ಸಂಚರಿಸಲಿದೆ. ಇದೇ ವೇಳೆ 10 ಬೋಗಿಗಳಿದ್ದ ತಿರುವನಂತಪುರ – ಕಾಸರಗೋಡು ವಂದೇ ಭಾರತ್ (20633/20634 ಎಕ್ಸ್‌ಪ್ರೆಸ್ ರೈಲುಗಾಡಿಗೆ ಜನವರಿ 10 ರಿಂದ 20 ಬೋಗಿಗಳಾಗಿ ವ್ಯವಸ್ಥೆಗೊಳಿಸಲಾಗಿತ್ತು.

ಕೇರಳೀಯರಿಂದ ಅತೀ ಹೆಚ್ಚು ರೈಲು ಸಂಚಾರ
ಕೇರಳೀಯರು ಅತೀ ಹೆಚ್ಚು ರೈಲುಗಾಡಿಗಳಲ್ಲಿ ಪ್ರಯಾಣಿಸುತ್ತಾರೆ. ಆದ್ದರಿಂದ ಮಂಗಳೂರು – ತಿರುವನಂತಪುರ ಹಾಗೂ ಕಾಸರಗೋಡು – ತಿರುವನಂತಪುರ ರೂಟ್‌ಗಳಲ್ಲಿ ಸಾಗುವ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಾಡಿಗಳು ನಿರಂತರ ಲಾಭದಾಯಕವಾಗಿ ಸಾಗುತ್ತಿದೆ. ಪ್ರತಿನಿತ್ಯವೂ ಈ ಎರಡು ರೈಲುಗಾಡಿಗಳು ತುಂಬಿ ತುಳುಕುತ್ತಿದ್ದು, ವೇಗದಾಯಕ ರೈಲುಗಾಡಿಗಳು ಪ್ರಯಾಣಿಕರಿಗೆ ಅತೀ ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಮಧ್ಯೆ ಕಾಸರಗೋಡು ಜಿಲ್ಲೆಯ ಜನರು ಕೂಡಾ ವಂದೇ ಭಾರತ್ ರೈಲುಗಾಡಿಗಳನ್ನೇ ಅತೀ ಹೆಚ್ಚು ಪ್ರಯಾಣಕ್ಕಾಗಿ ಆಶ್ರಯಿಸುತ್ತಿದ್ದಾರೆ.

ಇದನ್ನೂ ಓದಿ