ಹೊಸದಿಗಂತ ಡಿಜಿಟಲ್ ಡೆಸ್ಕ್:
ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಜುಂಟಾ ವೈಮಾನಿಕ ದಾಳಿ ನಡೆದಿದ್ದು, 19 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಶುಕ್ರವಾರ ಮಧ್ಯರಾತ್ರಿಯ ನಂತರ ಈ ದಾಳಿ ನಡೆದಿದ್ದು, ರಾಖೈನ್‌ನ ಕ್ಯುಕ್ತಾವ್ ಪಟ್ಟಣದಲ್ಲಿರುವ ಎರಡು ಖಾಸಗಿ ಪ್ರೌಢಶಾಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ.
2 ಖಾಸಗಿ ಪ್ರೌಢಶಾಲೆಗಳು ದಾಳಿಗೊಳಗಾಗಿ 15ರಿಂದ 21 ವರ್ಷದೊಳಗಿನ 19 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ವಿದ್ಯಾರ್ಥಿಗಳು ನಿದ್ರಿಸುತ್ತಿರುವಾಗ ಜುಂಟಾ ಯುದ್ಧ ವಿಮಾನವು ಶಾಲೆಯ ಮೇಲೆ ಎರಡು ಬಾಂಬ್‌ಗಳನ್ನು ಬೀಳಿಸಿದೆ ಎಂದು ಸ್ಥಳೀಯ ಮಾಧ್ಯಮವಾದ ಮ್ಯಾನ್ಮಾರ್ ನೌ ವರದಿ ಮಾಡಿದೆ.
ದೇಶದ ಸೇನೆಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ದಾಳಿಯನ್ನು ವಿಶ್ವಸಂಸ್ಥೆ ಖಂಡಿಸಿದೆ. ಇದು ಮಕ್ಕಳ ಮೇಲಿನ “ಕ್ರೂರ ದಾಳಿ” ಎಂದು ಹೇಳಿದೆ.